ಪ್ರವಾಸ-ವಾಹನ

ಬೆಂಗಳೂರಿನಿಂದ ದಕ್ಷಿಣ ಆಫ್ರಿಕಾಗೆ ನೇರ ವಿಮಾನ ಸೇವೆ ಪ್ರಾರಂಭ

Raghavendra Adiga

ಬೆಂಗಳೂರು: ದಕ್ಷಿಣ ಭಾರತದ ಹೆಬ್ಬಾಗಿಲು ಮತ್ತು ಆರೋಗ್ಯ ಹಾಗೂ ಶಿಕ್ಷಣದ ಕೇಂದ್ರವೆಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರಿನಿಂದ ಇಂದಿನಿಂದ ನೇರವಾಗಿ ದಕ್ಷಿಣ ಆಫ್ರಿಕಕ್ಕೆ ನಡುವೆ ಮೊದಲ ಬಾರಿಗೆ ನೇರ ವಿಮಾನಯಾನ ಸೇವೆ ಆರಂಭವಾಗಿದೆ ಎಂದು ಸಚಿವ ಸಿ.ಟಿ.ರವಿ ಅವರು ತಿಳಿಸಿದರು.

ನಗರದ ಖಾಸಗಿ ಹೊಟೇಲ್ ನಲ್ಲಿ ಆಯೋಜಿಸಿದ್ದ ವಿಮಾನಯಾನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವ ಸಿ.ಟಿ.ರವಿ ಅವರ ಸಂದೇಶ ತಿಳಿಸಲಾಯಿತು.ಅವರು ಸಂದೇಶದಲ್ಲಿ,ದಕ್ಷಿಣ ಆಫ್ರಿಕಾದ ಇಥಿಯೋಪಿಯ ದೇಶ ಹಾಗೂ ನಮ್ಮ ಬೆಂಗಳೂರು ನಡುವೆ ನೇರ ವಿಮಾನಯಾನ ಸಂಪರ್ಕ ಆರಂಭಗೊಳ್ಳುವ ಮೂಲಕ ದಕ್ಷಿಣ ಆಫ್ರಿಕಾ ಹಾಗೂ ದಕ್ಷಿಣ ಭಾರತದ ನಡುವೆ ಆರೋಗ್ಯ,ಶಿಕ್ಷಣ ಹಾಗೂ ಪ್ರವಾಸೋದ್ಯಮ, ರಾಜ್ಯಗಳ ನಡುವೆ ವಾಣಿಜ್ಯ ವ್ಯವಹಾರಗಳ ಬೆಳವಣಿಗೆಗೆ ಸಹಾಯವಾಗ ಲಿದ್ದು ರಾಜ್ಯದಲ್ಲಿ ಹೊಸ ಶಕೆ ಆರಂಭವಾಗಿದೆ ಎಂದು ಅವರು ಹೇಳಿದರು.

ವ್ಯಾಪಾರ, ಹೂಡಿಕೆ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ರಾಜ್ಯದ ಪ್ರವಾಸೋದ್ಯಮ ಇಲಾಖೆಯು ಇಥಿಯೋಪಿಯನ್ ವಿಮಾನಯಾನ ಸಂಸ್ಥೆಯನ್ನು ಸ್ವಾಗತಿಸುತ್ತದೆ. ಇದರಿಂದ ಕೇವಲ ನಮ್ಮ ರಾಜ್ಯವಷ್ಟೇ ಅಲ್ಲ, ಇಡೀ ದಕ್ಷಿಣ ಭಾರತದ ಪ್ರವಾಸಿಗರು, ಉದ್ಯಮಿಗಳು ಹಾಗೂ ಹೂಡಿಕೆದಾರರಿಗೂ ಇದರಿಂದ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಇಥಿಯೋಪಿಯನ್ ಏರ್ ಲೈನ್ಸ್ ನ ಮೊದಲ ವಿಮಾನವು ಇಂದು ಬೆಳಗ್ಗೆ 8 ಗಂಟೆಗೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ವಾರದಲ್ಲಿ ನಾಲ್ಕು ದಿನ ಈ‌ ವಿಮಾನ ಇಥಿಯೋಪಿಯಾ ಹಾಗೂ ಬೆಂಗಳೂರು ನಡುವೆ ಹಾರಾಟ ನಡೆಸಲಿದೆ. ಈ ವಿಮಾನಗಳ ಹಾರಾಟದಿಂದಾಗಿ ಅಡಿಸ್ ಅಬಾಬಾ ಮುಖಾಂತರ ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕದ 60 ತಾಣಗಳ ಸಂಪರ್ಕ ಸಾಧಿಸಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ‌ ನಿರ್ದೇಶಕರಾದ ಕೆ.ಎನ್.ರಮೇಶ್ ಹೇಳಿದರು. ಕಾರ್ಯಕ್ರಮದಲ್ಲಿ ಇಥಿಯೋಪಿಯನ್ ಏರ್ ಲೈನ್ಸ್ ಜಾಗತಿಕ ಸಿಇಓ ತೆವೋಲ್ಡೆ ಗೆಬ್ರೆಮರಿಯಮ್, ಇಥಿಯೋಪಿಯಾದಲ್ಲಿನ ಭಾರತದ ರಾಯಭಾರಿ ಅನುರಾಗ್ ಶ್ರೀವಾಸ್ತವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

SCROLL FOR NEXT