ಪ್ರೇಮಿಗಳ ದಿನ 
ಲೇಖನಗಳು

ಪ್ರೇಮಿಗಳ ಗ್ಯಾಜೆಟ್ ಲೋಕ

ಫೆಬ್ರವರಿ 14ನ್ನು ವಿಶೇಷವಾಗಿ ವ್ಯಾಖಾನಿಸುವ ಅವಶ್ಯಕತೆ ಇಲ್ಲ. 14ಕ್ಕೂ ಅಂದಾಕ್ಷಣ ಪ್ರತಿಯೊಬ್ಬರಿಗೂ ನೆನಪಾಗುವುದು ಪ್ರೇಮಿಗಳ ದಿನಾಚರಣೆ...

ಫೆಬ್ರವರಿ 14ನ್ನು ವಿಶೇಷವಾಗಿ ವ್ಯಾಖಾನಿಸುವ ಅವಶ್ಯಕತೆ ಇಲ್ಲ. 14ಕ್ಕೂ ಅಂದಾಕ್ಷಣ ಪ್ರತಿಯೊಬ್ಬರಿಗೂ ನೆನಪಾಗುವುದು ಪ್ರೇಮಿಗಳ ದಿನಾ ಅಂತ. ತಮ್ಮ ಅಂತರಂಗದಲ್ಲಿ ಪುಟಿಯೊಡೆದಿರುವ ಪ್ರೇಮ ನಿವೇದನೆಗೆ ಇದು ವಿಶಿಷ್ಟ ದಿನ. ಅಂತ ದಿನವನ್ನು ವಿಶಿಷ್ಟವಾಗಿ ಆಚರಿಸಿ, ನಲ್ಮೆಯ ಪ್ರಿಯತಮೆಯ ಮನವೊಲಿಸಬೇಕೇ ಇಲ್ಲಿದೆ ಕೆಲವೊಂದು ಟಿಪ್ಸ್.
ಪ್ರತಿ ಸಲದಂತೆ ಈ ವರ್ಷವು ತಮ್ಮ ಪ್ರೀತಿ ಪಾತ್ರರಿಗೆ. ಏನನ್ನು ಕೊಡಬೇಕು ಎಂದು ಮೊದಲೇ ಯೋಚಿಸಿರುತ್ತೀರಾ. ಚಿನ್ನ, ಬೆಳ್ಳಿ ಹೀಗೆ ಬೆಳೆಬಾಳುವ ಭಾರೀ ಮೊತ್ತದ ಉಡುಗೊರೆ ನೀಡಿ ಪ್ರಿಯತಮೆಯ ಮೆಚ್ಚುಗೆ ಸಂಪಾದಿಸಲು ನಿರ್ಧರಿಸಿದ್ದರೆ. ಅಂತ ಯೋಚನೆಯನ್ನು ಸ್ವಲ್ಪ ಸೈಡಿಗಿಡಿ. ಪರಿಸ್ಥಿತಿ ಬದಲಾದಂತೆ ಹುಡುಗಾ-ಹುಡುಗಿಯ ಮನಸ್ಥಿತಿಯು ಬದಲಾಗಿದೆ. ಅವರ ಆಸೆ ಅಭಿಲಾಷೆಗಳು ಕೊಂಚು ದಾರಿ ಬದಲಿಸಿವೆ. ಇದಕ್ಕಾಗಿ ಪ್ರೇಮಿಗಳು ತಮ್ಮ ಯೋಚನ ಲಹರಿ ಬದಲಿಸಿ ವಿಭಿನ್ನವಾಗಿ ಆಲೋಚಿಸಿ ಅದಕ್ಕೆ ಇಲ್ಲಿದೆ ಸಿದ್ಧ ಸೂತ್ರ.

ಪುಸಕ್ತ ಪ್ರಿಯರಿಗೆ ಇ-ರೀಡರ್ ಉತ್ತಮ ಉಡುಗೊರೆ


ಆ್ಯಂಡ್ರಾಯ್ಡ್ ಮೊಬೈಲ್ ಗಳ ಉಪಯೋಗದೊಂದಿಗೆ ಇಂದು ಜಗತ್ತನ್ನೇ ಬೆರಳಿಗೆ ತಂದಿರಿಸಲಾಗಿದೆ. ಫೇಸ್ಬುಕ್ ಮತ್ತು ವಾಟ್ಸಾಪ್ ಮೂಲಕ ಸಂದೇಶ ರವಾನೆ. ಫೋಟೋಗಳ ವಿನಿಮಯ. ಹೀಗೆ ಹಲವು ಉಪಯೋಗಗಳಿವೆ. ಅದೇ ರೀತಿ ಪುಸಕ್ತ ಪ್ರಿಯರಿಗಾಗೆ ಅಮೆಜಾನ್ ಇ-ರೀಡರ್ ಸೌಲಭ್ಯವನ್ನು ಒದಗಿಸುತ್ತಿದೆ. ಈ ಸೇವೆಯನ್ನು ಬಳಸಿಕೊಳ್ಳಲು 79 ಡಾಲರ್ ಮೊತ್ತ ನಿಗದಿ ಪಡಿಸಲಾಗಿದೆ. ಇಂತಹ ಉಡುಗೊರೆ ನೀಡಿದರೆ ನಿಮ್ಮ ಪ್ರಿಯತಮೆ ಖುಷಿಪಡುತ್ತಾರೆ.

ಹೆಡ್ ಫೋನ್


ಸಂಗೀತವನ್ನು ಹೆಚ್ಚಾಗಿ ಕೇಳುವವರಿಗೆ ಹೆಡ್ ಫೋನ್ ಅನ್ನು ಉಡುಗೊರೆಯಾಗಿ ನೀಡಿ. ಅದು ಕಡಿಮೆ ಬೆಲೆಯಲ್ಲಿ ನೀವು ಮೆಚ್ಚುವ ಬಣ್ಣದಲ್ಲಿ ಹೆಡ್ ಫೋನ್ಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಕೇವಲ 35 ಡಾಲರ್ ನಲ್ಲೇ ನಿಮ್ಮ ಪ್ರೀತಿಪಾತ್ರರಿಗೆ ಖುಷಿ ನೀಡಬಹುದು.

ಡಿಎಸ್ಎಲ್ಆರ್ ಕ್ಯಾಮರಾ


ಉತ್ಕೃಷ್ಟ ಮಟ್ಟದ ಡಿಎಸ್ಎಲ್ಆರ್ ಕ್ಯಾಮರಾ ಹೆಚ್ಚು ಮೌಲ್ಯವರ್ಧಿತವಾಗಿರುತ್ತದೆ. ಹವ್ಯಾಸಿ ಛಾಯಾಗ್ರಾಹಕರಿಗೆ ಡಿಎಸ್ಎಲ್ಆರ್ ಕ್ಯಾಮರಾ ಹೆಚ್ಚು ಖುಷಿ ನೀಡುತ್ತದೆ.
ನಿಮ್ಮ ಪ್ರೀತಿ ಪಾತ್ರರೊಂದಿಗಿನ ವ್ಯಾಲೆಂಟೈನ್ ಫೋಟೋಗಳನ್ನು ತೆಗೆದುಕೊಳ್ಳಲು ತವಕಿಸುವ ಕ್ಷಣ. ಇದಕ್ಕಾಗಿ ಗುಣಮಟ್ಟದಲ್ಲಿ ಅಪ್ಗ್ರೇಡ್ ಆಗಿರುವ ಡಿಎಸ್ಎಲ್ಆರ್ ಕ್ಯಾಮರಾ ಉಡುಗೊರೆ ನೀಡಬಹುದು.
ಕ್ಯಾನನ್ EOS ರೆಬೆಲ್ T3 ಲೆನ್ಸ್ ಕಿಟ್ ಒಂದು 18-55mm ಲೆನ್ಸ್ ಮತ್ತು 12.2 ಮೆಗಾಪಿಕ್ಸೆಲ್ಗಳವರೆಗಿರುವ ಹಾಗೂ ಒಂದು ಎಚ್ಡಿ ಕ್ಯಾಚ್ಚರ್ ಸಮರ್ಥ್ಯ ಹೊಂದಿದೆ. ಕ್ಯಾನನ್ ಕಂಪನಿಯ ಈ ಕ್ಯಾಮೆರಾದ ಬೆಲೆ ಸುಮಾರು 578,98 ಡಾಲರ್.

ಯುಎಸ್ಬಿ ಫ್ಯಾಷ್ ಡ್ರೈವ್


ಮಾರ್ಕ್ ಬೈ ಮಾರ್ಕ್ ಜಾಕೋಬ್ ಸಂಸ್ಥೆಯ ಅತೀ ಕಡಿಮೆ ಮೌತ್ತದ ಹೃದಯ ಆಕಾರದಲ್ಲಿರುವ ಯುಎಸ್ಬಿ ಫ್ಯಾಷ್ ಡ್ರೈವ್ ಕೀ ಚೈನ್ ಗಿಫ್ಟ್ ಮಾಡಬಹುದು. ಬೆಲೆ 42 ಡಾಲರ್ ಮಾತ್ರ.

ಪೋರ್ಟಲ್ 2 ವಿಡಿಯೋ ಗೇಮ್


ಉತ್ತಮ ಗುಣಮಟ್ಟದ ನವೀರಾದ ಹಾಗೂ ಮನರಂಜನಾತ್ಮಕವಾದ ಪೋರ್ಟಲ್ ಸರಣಿಯ ವಿಡಿಯೋ ಗೇಮ್ ಗಳನ್ನು ಉಡುಗೊರೆಯಾಗಿ ನೀಡಬಹುದು. ನಿಮ್ಮ ಪ್ರೀತಿ ಪಾತ್ರರು ವಿಭಿನ್ನವಾಗಿರುವುದನ್ನು ಬಯಸುತ್ತಿದ್ದರೆ ಅಂತವರಿಗೆ ಪೋರ್ಟಲ್ 2 ಬಳಸಲು ನೀಡಿ ಅವರು ಹೆಚ್ಚು ಖುಷಿ ಪಡುತ್ತಾರೆ. ಪಿಸಿ, ಮ್ಯಾಕ್, ಎಕ್ಸ್ ಬಾಕ್ಸ್ 360, ಮತ್ತು PS3ಗೆ ಹೊಂದುತ್ತವೆ. ಇದನ್ನು ಕೇಲವ 29.99ಗೆ ಖರೀದಿಸಬಹುದು.

ಯುಎಸ್ಬಿ ಮೈಕ್


ಕಂಪ್ಯೂಟರ್ ನಲ್ಲಿ ಹೆಚ್ಚು ಹಾಡುಗಳನ್ನು ಕೇಳುವವರಿಗೆ ಇಲ್ಲಿದೆ ಯುಎಸ್ ಬಿ ಮೈಕ್. ಈ ಮೈಕ್ರೊಫೋನ್ ನಲ್ಲಿ ರೆಕಾರ್ಡಿಂಗ್ ಮಾಡಬಹುದು. ಆಪಲ್ ಮಳಿಗೆಗಳಲ್ಲಿ ನೀವು 149.95 ಡಾಲರ್ಗೆ ಈ ಮೈಕ್ ಖರೀದಿಸಬಹುದು.


- ವಿಶ್ವನಾಥ್ ಎಸ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

SCROLL FOR NEXT