ಲೇಖನಗಳು

ನಿನ್ ಮದ್ವೇ ಯಾವಾಗ?

ನನ್ನ ಪ್ರೀತಿ ನೀನು. ನನ್ನ ಫ್ಯಾಮಿಲಿನಾ ನಮ್ಮ ಫ್ಯಾಮಿಲಿ ಮಾಡಿಕೊಳ್ಳಬೇಕು ಎಂದು ಅವರ ಕನಸು ನನಸು ಮಾಡಲು ದೂರ ಹೋಗಿದ್ಯಾ...

ನಿನ್ ಮದ್ವೇ ಯಾವಾಗ? ನಿನ್ ಮದ್ವೇ ಯಾವಾಗ? ನಿನ್ ಮದ್ವೇ ಯಾವಾಗ?....
ಅಬ್ಬಾ ಈ ಪ್ರಶ್ನೆ ಕೇಳಿ ಕೇಳಿ ಹುಚ್ಚು ಹಿಡಿದಂಗಾಗಿ ನನ್ನ ಮದ್ವೇ ಯಾವಾಗ? ಅಂತ ನನ್ನಲ್ಲೇ ಪ್ರಶ್ನೆ ಹುಟ್ಟಿದೆ. ಲೋ ಬಾರೋ ಬೇಗ ಮದ್ವೇ ಆಗಿ, ಮದ್ವೇ ಯಾವಾಗ ಅನ್ನೋ ಪ್ರಶ್ನೆಗೆ ಅಂತ್ಯ ಹಾಡೋಣ. ನಂಗೂ ಸಾಕಾಗಿದೆ, ಇಲ್ಲ ಸಲ್ಲದ ಉತ್ತರ ಕೊಟ್ಟು ಕೊಟ್ಟೂ... ಗೆಳತಿ-ಗೆಳೆಯರ ಬಾಯಲ್ಲಿ ಮದ್ವೆ ಚಿಂತೆ. ಅದೂ ಅವ್ರ ಮದ್ವೆ ಫಿಕ್ಸ್ಸ್ ಆಯ್ತು ಅಂತಾ, ನನ್ನ ಮದ್ವೆ ಬಗ್ಗೆ ಕೇಳ್ತಾರೆ...

ಇಲ್ಲ ಅಂದ್ರೆ ಮದ್ವೆ ವಿಚಾರಾನೇ ಇಲ್ಲ. ಏನ್ ಮಾಡೋದ್ ಸಮಾಜಾನೇ ಹಾಗೆ ಅಂದುಕೊಂಡ್ರು ಕಿರಿಕಿರಿ ಮಾತ್ರ ತಪ್ಪಿದ್ದಲ್ಲ. ಸಂಬಂಧಿಕರಿಂದ ತಪ್ಪಿಸಿಕೊಂಡ್ರು, ಸ್ನೇಹಿತರು ಬಿಡಲ್ಲ, ಸ್ನೇಹಿತರಿಂದ ತಪ್ಪಿಸಿಕೊಂಡ್ರು, ಸಹದ್ಯೋಗಿಗಳು ಬಿಡಲ್ಲ, ಇನ್ನೂ ಸಹದ್ಯೋಗಿಗಳಿಂದ ತಪ್ಪಿಸಿಕೊಂಡ್ರು, ಬಸ್‌ನ ಸೀಟಿನಲ್ಲಿ ಪಕ್ಕದಲ್ಲಿ ಕುಳಿತ ವಯಸ್ಸಾದ ಮಹಿಳೆಯರು ಕೇಳುವ ಪ್ರಶ್ನೆ ಮದ್ವೆ ಯಾವಾಗ? ನನ್ ಮದ್ವೆ ನನ್ನವನು ಸಿಕ್ಕಾಗ ಅಂತ ಗೆಳೆಯರ ಬಳಿ, ನನ್ ಮದ್ವೆ ಕಂಕಣ ಬಲ ಕೂಡಿ ಬಂದಾಗ ಅಂತ ಸಹದ್ಯೋಗಿಗಳ ಬಳಿ, ಊಹ್ಞೂ, ಮನೆಯಲ್ಲಿ ನೋಡ್ತಾ ಇದಾರೆ, ಸದ್ಯದಲ್ಲೇ ಆಗುತ್ತೆ ಅಂತಾ ಬಸ್‌ನಲ್ಲಿ ಕೇಳೋ ಹೆಂಗಸರಿಗೆ ಸಬೂಬ್ ಹೇಳಿ ಸಾಕಾಗಿದೆ.

ಲೋ ಅದೇನ್ ಕೆಲ್ಸಾ ಇದೆಯೋ ಬೇಗ ಮುಗಿಸಿ ಬಾ ಮದುವೆ ಆಗೋಣ. ನಂಗೂ ಸಾಕಾಗಿದೆ. ಇವರಿಗೆಲ್ಲಾ ಏನ್ ಗೊತ್ತು ನಾನ್ ನಿಂಗಾಗಿ ಕಾಯ್ತಾ ಇದೀನಿ ಅಂತಾ. ನಮ್ಮಿಬ್ಬರ ಪ್ರೀತಿ ಯಾರಿಗೇ ಹೇಗೆ ಅರ್ಥ ಆಗುತ್ತೆ ಹೇಳು. ನೀನಲ್ಲಿ ನಾನಿಲ್ಲಿ, ನಮ್ಮದೇ ಆದ ಕನಸು, ಕನಸಿನಲ್ಲಿ ನಮ್ಮೊಳಗಿನ ಮಾತು. ಇಷ್ಟೆಲ್ಲಾ ಇದ್ರೂ ಹೊರನೋಟಕ್ಕೆ ಬಹಳ ದೂರ. ನಮ್ಮ ಪ್ರೀತಿಯಲ್ಲಿ ಕಾಯುವಿಕೆ ಇರೋದು ಯಾರಿಗೂ ತಿಳಿತಿಲ್ಲ. ಅದನ್ನಾ ಹೇಳೋಕು ಆಗಲ್ಲ. ವಾಲೆಂಟೈನ್ಸ್ ಡೇ ಹತ್ರ ಬಂತೂ ಅಂದ್ರೆ ನಿನ್ನ ನೋಡೋ ಆಸೆ ಹೆಚ್ಚಾಗಿದೆ. ಆದ್ರೆ ಎನ್ ಮಾಡೋದು, ಅದಕ್ಕೂ ಸಾಧ್ಯವಾಗುತ್ತಿಲ್ಲ. ನಾನ್ ಲವ್ ಮಾಡ್ತಾ ಇರೋದು ಯಾರಿಗೂ ಗೊತ್ತಿಲ್ಲ. ಆದ್ರೆ ನಾನೂ ಲವ್ ಮಾಡ್ತಾ ಇದೀನಿ, ನನ್ನ ಪ್ರೀತಿ ಬರುವಿಕೆಗಾಗಿ ಕಾಯ್ತಾ ಇದೀನಿ ಅಂತಾ ಹೇಳೋನಾ ಅಂತ ಅನಿಸುತ್ತೆ. ಲವ್ ಮಾಡ್ತಾ ಇದಿಯಾ, ಯಾರಪ್ಪ ಅದು, ಮನೇಲಿ ಒಪ್ತಾರ? ಏನ್ ಮಾಡ್ಕೊಂಡು ಇದಾರೆ, ಯಾಕ್ ಮತ್ತೆ ಮದ್ವೆ ಲೇಟು... ಮತ್ತೆ ಈ ಪ್ರಶ್ನೆಗಳ ಸುರಿಮಳೆ ಬೇರೆ ಶುರುವಾಗುತ್ತೆ.

ಅದಕ್ಕೆ ಲವ್ ಮಾಡ್ತಾ ಇಲ್ಲ ಅಂತ ಹೇಳಿ, ಮದ್ವೇ ಯಾವಾಗ ಅನ್ನೋ ಪ್ರಶ್ನೆ ಒಂದೇ ಸಾಕು ಅನಿಸಿಬಿಟ್ಟಿದೆ. ನನ್ನ ಪ್ರೀತಿ ನೀನು. ನನ್ನ ಫ್ಯಾಮಿಲಿನಾ ನಮ್ಮ ಫ್ಯಾಮಿಲಿ ಮಾಡಿಕೊಳ್ಳಬೇಕು ಎಂದು ಅವರ ಕನಸು ನನಸು ಮಾಡಲು ದೂರ ಹೋಗಿದ್ಯಾ. ಆದ್ರೆ, ಮಿಸ್ ಯು ಅಂತಾ ಅನಿಸ್ತೇ ಕಣೋ, ನೋ ನೋ, ನಾನ್ಯಾಕೇ ನಿನ್ನ ಮಿಸ್ ಮಾಡ್ಕೊಳ್ಳಿ, ನೀನು ನನ್ನಲ್ಲಿಯೇ ಇದ್ದೀಯಲ್ಲ್ಲಾ. ಆದ್ರೂ ವಾಲೆಂಟೈನ್ಸ್ ಡೇ ಹತ್ರ ಬಂತು ಕಣೋ, ಲವರ್ಸ್ ಪ್ಲಾನ್‌ಗಳು ಹೆಚ್ಚಾಗ್ತಾ ಇದೆ. ಎಲ್ರೂ ಫಿಲ್ಮ್, ಕ್ಯಾಂಡೆಲ್ ಲೈಟ್ ಡಿನ್ನರ್, ಲವರ್ ಸ್ಪೆಷಲ್ ಡೇ ಅಂತಾ ಪ್ರೋಗ್ರಾಂ ಮಾಡ್ಕೊಳ್ತಾ ಇದಾರೆ. ಹೊಟ್ಟೆ ಉರಿಯುತ್ತೇ, ಅಳು ಬಂದಂಗಾಗುತ್ತೇ, ಅದಕ್ಕೆ ಮಿಸ್ ಯು ಅಂತಾ ಅನಿಸುತ್ತೇ, ಹೋಗ್ಲಿ ನೆಕ್ಸ್ಟ್ ಇಯರ್ ಸೆಲೆಬ್ರೆಷನ್ ಮಾಡೋಣ ಅಂತಾ ಅಂದುಕೊಂಡೇ ಐದು ವರ್ಷ ಆಯ್ತು. ಇನ್ಯಾವ್ ಇಯರ್ ನಾವು ಸೆಲೆಬ್ರೇಟ್ ಮಾಡೋದು? ಹಾಗಂತ ನಮ್ಗೆ ದಿನಾ ವಾಲೆಂಟೈನ್ಸ್ ಡೇ ಅಂತ ಸಮಾಧಾನ ಮಾತ್ರ ಮಾಡೋಕೆ ಹೋಗ್ಬೇಡಾ..... ಲವ್ ಯೂ ಸೋ ಮಚ್, ಮಿಸ್ ಯೂ ನಾಟ್ ಮಚ್ ಯಾಕಂದ್ರೆ ಯು ಆರ್ ಮೈ ಸಬ್ ಕುಚ್.

- ಮೈನಾಶ್ರೀ .ಸಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT