ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಗೋವಾದಿಂದ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಹಳೆಯ ಸೇತುವೆಯೊಂದು ಬುಧವಾರದ ಬೆಳಗಿನ ಜಾವ ಕುಸಿದು ಬಿದ್ದ ಪರಿಣಾಮ ಕಾರವಾರ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. 01.30 ರ ಸುಮಾರಿಗೆ ಟ್ರಕ್ ದಾಟುತ್ತಿದ್ದಾಗ ಸೇತುವೆಯು ಕುಸಿದಿದೆ. ವಾಹನದ ಚಾಲಕ ತಮಿಳುನಾಡು ಮೂಲದ ಬಾಲ ಮುರುಗನ್ (37) ಗಾಯಗೊಂಡಿದ್ದಾನೆ ಎಂದು ಕಾರವಾರ ಪೊಲೀಸರು ತಿಳಿಸಿದ್ದಾರೆ.