ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ತಾನು ಓದುತ್ತಿರುವ ಶಾಲೆಯ ಆಟದ ಮೈದಾನದ ಕಾಂಪೌಂಡ್‌ಗಾಗಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾಳೆ.
ತುಮಕೂರು ತಾಲ್ಲೂಕಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸಿಮ್ರಾ ಸನೋಬಾರ್, ತರಗತಿಯನ್ನು ಬಹಿಷ್ಕರಿಸಿ ಏಕಾಂಗಿ ಹೋರಾಟವನ್ನು ಪ್ರಾರಂಭಿಸಿದ್ದಾಳೆ.
105 ವಿದ್ಯಾರ್ಥಿಗಳು ಓದುತ್ತಿರುವ ಸರ್ಕಾರಿ ಶಾಲೆಗೆ ಸರಿಯಾದ ಭದ್ರತೆ ಇಲ್ಲ. ಆಟದ ಮೈದಾನಕ್ಕಾಗಿ ಕಾಂಪೌಂಡ್ ನಿರ್ಮಿಸುವವರೆಗೆ ಶಾಲೆಗೆ ಬರುವುದಿಲ್ಲ ಎಂದು ವಿದ್ಯಾರ್ಥಿನಿ ಪಟ್ಟು ಹಿಡಿದಿದ್ದಾಳೆ. ವಿಡಿಯೋ ಇಲ್ಲಿದೆ ನೋಡಿ.