ಗಾಜಿಯಾಬಾದ್ ನಿವಾಸಿಗಳಿಗೆ ಕತ್ತಿಗಳನ್ನು ವಿತರಿಸಿದ ಆರೋಪದ ಮೇಲೆ 10 ಜನರನ್ನು ಬಂಧಿಸಲಾಗಿದೆ.
ಈ ಘಟನೆ ಸೋಮವಾರ (ಡಿಸೆಂಬರ್ 29, 2025) ರಂದು ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಈ ವಿಡಿಯೋದಲ್ಲಿ ಬಲಪಂಥೀಯ ಸಂಘಟನೆಯಾದ ಹಿಂದೂ ರಕ್ಷಾ ದಳದ ಸದಸ್ಯರು ಗಾಜಿಯಾಬಾದ್‌ನಲ್ಲಿ ಕತ್ತಿಗಳನ್ನು ವಿತರಿಸುತ್ತಿರುವುದನ್ನು ಕಾಣಬಹುದು.
ಪೊಲೀಸರು ಕನಿಷ್ಠ 46 ಜನರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 191(2), 191(3) ಮತ್ತು 127(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.