ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿ ತಿಂಗಳುಗಳೇ ಕಳೆದಿವೆ.
ರಾಜಧಾನಿ ಢಾಕಾದಲ್ಲಿ ಅವರ ಭಿನ್ನಮತೀಯರನ್ನು ಬಂಧಿಸಲು ಬಳಸಲಾಗುತ್ತಿತ್ತು ಎನ್ನಲಾದ ರಹಸ್ಯ ಜೈಲುಗಳನ್ನು ಬಹಿರಂಗಗೊಳಿಸಲಾಗಿದೆ.
ರಾಯಿಟರ್ಸ್ ವರದಿ ಪ್ರಕಾರ, ಅವರ ಆಳ್ವಿಕೆಯಲ್ಲಿ ರಹಸ್ಯ ಲಾಕ್‌ಅಪ್‌ಗಳನ್ನು ಸ್ಥಾಪಿಸಲಾಯಿತು.
ಭಿನ್ನಮತೀಯರನ್ನು ವರ್ಷಗಳ ಕಾಲ ಗೌಪ್ಯ ಸೆಲ್ ಗಳಲ್ಲಿ ಬಂಧಿಸಿ ಕಣ್ಮರೆಯಾಗಿಸಲಾಗುತ್ತಿತ್ತು ಎಂದು ರಾಯಿಟರ್ಸ್ ಹೇಳಿದೆ.
ಫೆಬ್ರವರಿ 12 ರಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಢಾಕಾದಲ್ಲಿರುವ ರಹಸ್ಯ ಜೈಲಿಗೆ ಭೇಟಿ ನೀಡಿದರು. ವಿಡಿಯೋ ಇಲ್ಲಿದೆ ನೋಡಿ.