ಸ್ಪೇನ್‌ನ ಝಮೋರಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಲಿವರ್‌ಪೂಲ್ ತಂಡದ ಖ್ಯಾತ ಫುಟ್ಬಾಲ್ ತಾರೆ ಡಿಯೋಗೋ ಜೋಟಾ ದುರಂತ ಸಾವಿಗೀಡಾಗಿದ್ದಾರೆ.
ಫಾರ್ವಡ್ ಪ್ಲೇಯರ್ ಡಿಯೋಗೋ ಜೋಟಾ ಅವರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅವರ ಸಹೋದರ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಫುಟ್ಬಾಲ್ ಪಂದ್ಯಕ್ಕಾಗಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ, ಕಾರು ಅಪಘಾತಕ್ಕೀಡಾದ ಬೆನ್ನಲ್ಲೆ ಬೆಂಕಿ ಕಾಣಿಸಿಕೊಂಡು ಇಡೀ ಕಾರು ಸುಟ್ಟು ಕರಕಲಾಗಿದೆ.
ಜೋಟಾ ಹಾಗೂ ಅವರ ಸಹೋದರ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ವಿಡಿಯೋ ಇಲ್ಲಿದೆ ನೋಡಿ.