ಮಧ್ಯ ಪ್ರದೇಶದ ಬೇತುಲ್ ಜಿಲ್ಲೆಯ ಆಮ್ಲಾ ಬ್ಲಾಕ್‌ನ ಇಬ್ಬರು ಮಕ್ಕಳು ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿದ ನಂತರ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.
ಮೃತ ಮಕ್ಕಳನ್ನು ಕಲ್ಮೇಶ್ವರ ಗ್ರಾಮದ ಕಬೀರ್(4) ಮತ್ತು ಬಿಚುವಾ ಗ್ರಾಮದ ಎರಡೂವರೆ ವರ್ಷದ ಗಾರ್ಮಿತ್ ಎಂದು ಗುರುತಿಸಲಾಗಿದೆ.
ಇದರೊಂದಿಗೆ ಮಧ್ಯ ಪ್ರದೇಶದಲ್ಲಿ ಕೋಲ್ಡ್ರಿಫ್ ಸಿರಪ್ ನಿಂದ ಮೃತಪಟ್ಟ ಮಕ್ಕಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ವಿಡಿಯೋ ಇಲ್ಲಿದೆ ನೋಡಿ.