ವಿಕಸಿತ್ ಭಾರತ್ 2047 ಕೇವಲ ಘೋಷಣೆಯಲ್ಲ ಅದೊಂದು ರಾಷ್ಟ್ರೀಯ ಸಂಕಲ್ಪ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಮುಂದಿನ ಎರಡು ದಶಕಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸಲು ನಾಗರಿಕರು ಸಾಮೂಹಿಕವಾಗಿ "ಬೃಹತ್ ಯಜ್ಞ" ಕೈಗೊಳ್ಳಬೇಕೆಂದು ಅವರು ಕರೆ ನೀಡಿದರು.
ದೇರಳಕಟ್ಟೆಯ ಆವರಣದಲ್ಲಿ ನಿಟ್ಟೆ ವಿಶ್ವ ವಿದ್ಯಾನಿಲಯದ ವತಿಯಿಂದ ನಿಟ್ಟೆ ವಿನಯ ಹೆಗ್ಡೆ ಸ್ಮರಣಾರ್ಥ ಹಮ್ಮಿಕೊಂಡ ವಿಕಸಿತ -ಭಾರತ 2047 ರ ಮುನ್ನೋಟದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ವಿಡಿಯೋ ಇಲ್ಲಿದೆ ನೋಡಿ.