ವಿಡಿಯೋ

ರಜತ್ ಪಾಟಿದಾರ್ ಔಟ್ ವಿವಾದ: ಚೆಂಡು ನೆಲಕ್ಕೆ ತಾಗಿದ್ದರೂ ಅಂಪೈರ್ ಎಡವಟ್ಟು; Virat Kohli ಆಕ್ರೋಶ, Video!

ಐಪಿಎಲ್ 2026ರ 42ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಯಕ ರಜತ್ ಪಾಟಿದಾರ್ ಗುಜರಾತ್ ಟೈಟಾನ್ಸ್ ಬೌಲರ್ ಅರ್ಷದ್ ಖಾನ್ ಬೌಲಿಂಗ್ ನಲ್ಲಿ ಔಟ್ ಆದಾಗ ಗೊಂದಲ ಭುಗಿಲೆದ್ದಿತು. ಈ ವೇಳೆ ವಿರಾಟ್ ಕೊಹ್ಲಿ ಆಕ್ರೋಶಗೊಂಡರು.

ಐಪಿಎಲ್ 2026ರ 42ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಯಕ ರಜತ್ ಪಾಟಿದಾರ್ ಗುಜರಾತ್ ಟೈಟಾನ್ಸ್ ಬೌಲರ್ ಅರ್ಷದ್ ಖಾನ್ ಬೌಲಿಂಗ್ ನಲ್ಲಿ ಔಟ್ ಆದಾಗ ಗೊಂದಲ ಭುಗಿಲೆದ್ದಿತು. ಈ ವೇಳೆ ವಿರಾಟ್ ಕೊಹ್ಲಿ ಆಕ್ರೋಶಗೊಂಡಿದ್ದು ಅಂಪೈರ್ ಜೊತೆ ವಾಗ್ವಾದ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್ ಆಹ್ವಾನಿಸಿದರು. ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ ತಂಡದ ಆರಂಭ ಕಳಪೆಯಾಗಿತ್ತು. 35 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು.

ಇದರ ನಂತರ, ಆರ್‌ಸಿಬಿ ನಾಯಕ ರಜತ್ ಪಾಟಿದಾರ್, ದೇವದತ್ ಪಡಿಕ್ಕಲ್ ಅವರೊಂದಿಗೆ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಲು ಪ್ರಯತ್ನಿಸಿದರು. ಅರ್ಷದ್ ಖಾನ್ ಗುಜರಾತ್ ಇನ್ನಿಂಗ್ಸ್‌ನ ಎಂಟನೇ ಓವರ್ ಮಾಡಿದರು. ಮೂರನೇ ಎಸೆತವನ್ನು ರಜತ್ ಪಾಟಿದಾರ್ ಪುಲ್ ಶಾಟ್ ಆಡಲು ಪ್ರಯತ್ನಿಸಿದರು. ಆದಾಗ್ಯೂ, ಚೆಂಡು ಮೇಲ್ಭಾಗದ ಅಂಚಿಗೆ ತಾಗಿ ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್ ಕಡೆಗೆ ಹೋಯಿತು. ಬೌಂಡರಿ ಗೆರೆಯಲ್ಲಿದ್ದ ಹೋಲ್ಡರ್ ಓಡಿ ಕ್ಯಾಚ್ ಹಿಡಿದ್ದರು. ಚೆಂಡು ನೆಲಕ್ಕೆ ತಾಗಿತು. ಅಂಪೈರ್ ಅದನ್ನು ಔಟ್ ಎಂದು ನೀಡಿದರು. ನಂತರ ಆರ್‌ಸಿಬಿ ನಾಯಕ ಅಂಪೈರ್ ಜೊತೆ ವಾದಿಸಲು ಪ್ರಾರಂಭಿಸಿದರು. ಹೋಲ್ಡರ್ ಕ್ಯಾಚ್ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿಲ್ಲ ಮತ್ತು ಚೆಂಡು ನೆಲಕ್ಕೆ ತಾಗಿತೂ ಎಂದು ಹೇಳಿದರು. ಆದಾಗ್ಯೂ, ಮೂರನೇ ಅಂಪೈರ್ ಇನ್ನೂ ಅದನ್ನು ಔಟ್ ಎಂದು ನೀಡಿದರು.

ಆರ್‌ಸಿಬಿ ಮುಖ್ಯ ತರಬೇತುದಾರ ಆಂಡಿ ಫ್ಲವರ್ ಕೂಡ ನಾಲ್ಕನೇ ಅಂಪೈರ್ ಜೊತೆ ಮಾತನಾಡುತ್ತಿರುವುದು ಕಂಡುಬಂದಿತು. ಆದರೆ ಅಂಪೈರ್‌ಗಳ ನಿರ್ಧಾರ ಬದಲಾಗದೆ ಉಳಿಯಿತು. ರಜತ್ ಪಾಟಿದಾರ್ ಪೆವಿಲಿಯನ್‌ಗೆ ಹಿಂತಿರುಗಬೇಕಾಯಿತು. ವಿರಾಟ್ ಕೊಹ್ಲಿ ಕೂಡ ಈ ನಿರ್ಧಾರಕ್ಕೆ ಕೋಪ ವ್ಯಕ್ತಪಡಿಸಿದ್ದು ಕಂಡುಬಂದಿದೆ. ರಜತ್ ಪಾಟಿದಾರ್ 15 ಎಸೆತಗಳಲ್ಲಿ ಕೇವಲ 19 ರನ್‌ಗಳಿಗೆ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ಔಟಾದರು. ವಿರಾಟ್ ಕೊಹ್ಲಿ ಕೂಡ ಈ ಪಂದ್ಯದಲ್ಲಿ ಹೆಚ್ಚಿನದನ್ನು ಮಾಡಲು ವಿಫಲರಾದರು. ಅವರು 13 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ 28 ರನ್ ಗಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Exit polls ಮೇಲೆ ನನಗೆ ನಂಬಿಕೆ ಇಲ್ಲ: ಅದೊಂದು ಜಾಲ- ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕಿಡಿ!

ಬೌರಿಂಗ್ ಆಸ್ಪತ್ರೆ ದುರಂತ: ಕಾರ್ಯನಿರ್ವಾಹಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಧಾರವಾಡ ವಿದ್ಯಾಗಿರಿ ಠಾಣೆ ಇನ್ಸ್​​ಪೆಕ್ಟರ್ ರಫೀಕ್​​ ಅಮಾನತು!

'ಅಮೆರಿಕನ್ನರಿಗೆ ಗಲ್ಫ್ ನೀರಿನ ಕೆಳಭಾಗವೇ ಗತಿ': 'ಪರಮಾಣು, ಕ್ಷಿಪಣಿ ಸಾಮರ್ಥ್ಯ' ರಕ್ಷಣೆಗೆ ಬದ್ಧ- ಖಮೇನಿ ಪ್ರತಿಜ್ಞೆ

ಟ್ರಂಪ್ ಯೋಜನೆ ಬುಡಮೇಲು ಮಾಡಿದ ಪಾಕಿಸ್ತಾನ: ನಿರ್ಬಂಧಕ್ಕೆ Dont Care; ರಷ್ಯಾ, ಚೀನಾ ಜೊತೆ ವ್ಯಾಪಾರಕ್ಕೆ ಇರಾನ್ ಗೆ ನೆರವು!

SCROLL FOR NEXT