ರಾಕಿಂಗ್ ಸ್ಟಾರ್ ಯಶ್ ನಟನೆಯ ಗೀತು ಮೋಹನ್‌ದಾಸ್ ನಿರ್ದೇಶನದ ಅತೀವ ನಿರೀಕ್ಷೆಯ 'ಟಾಕ್ಸಿಕ್' ಸಿನಿಮಾ ಬುಧವಾರ ತೆರೆಕಂಡಿದೆ.
ಹಲವೆಡೆ ಅಭಿಮಾನಿಗಳು ಚಿತ್ರಮಂದಿರದ ಎದುರು ಡೋಲು ಬಾರಿಸುವ ಮೂಲಕ, ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದ್ದಾರೆ.
ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಮೊದಲ ಪ್ರದರ್ಶನ ವೀಕ್ಷಿಸಿದ ನಟ ಯಶ್ ಅಭಿಮಾನಿಗಳು, ಆಕ್ಷನ್ ತುಂಬಿದ ಚಿತ್ರ ಮತ್ತು ನಟರ ನಟನೆಯನ್ನು ನೋಡಿ ಸಂತೋಷಪಟ್ಟರು.
ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಟಾಕ್ಸಿಕ್' ಚಿತ್ರವನ್ನು ಜನರು ಹೊಗಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.