ಬಿಹಾರ ವಿಧಾನ ಪರಿಷತ್ತಿನಲ್ಲಿ ಸೋಮವಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿಯನ್ನು "ಯೇ ಲಡ್ಕಿ (ಹುಡುಗಿ)" ಎಂದು ಕರೆದಿದ್ದಾರೆ.
ರಾಬ್ರಿ ಅವರನ್ನು ಉದ್ದೇಶಿಸಿ ಮಾತನಾಡುತ್ತಾ, ನಿತೀಶ್, “ಯೇ ಜೋ ಲಡ್ಕಿ ಹೈ… ಕಭಿ ಕುಚ್ ಕಾಮ್ ಕಿ ಹೈ? ಇಸ್ಕಾ ಪತಿ ಹತಾ, ತೋ ಇಸ್ಕೋ ಬನಾ ದಿಯಾ ಸಿಎಂ..
(ಈ ಹುಡುಗಿ… ಅವಳು ಎಂದಾದರೂ ಏನಾದರೂ ಕೆಲಸ ಮಾಡಿದ್ದಾಳೆಯೇ? ಅವಳ ಪತಿಯನ್ನು ಅಧಿಕಾರದಿಂದ ಕೆಳಗಿಳಿಸಿದಾಗ, ಅವರು ಅವಳನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು).
ವಿರೋಧ ಪಕ್ಷದ ನಾಯಕಿ ಮತ್ತು ಬಿಹಾರದ ಮೊದಲ ಮಹಿಳಾ ಮುಖ್ಯಮಂತ್ರಿ ರಾಬ್ರಿ ದೇವಿ ಅವರು ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದಾಗ ವಾದ ಪ್ರಾರಂಭವಾಯಿತು. ವಿಡಿಯೋ ಇಲ್ಲಿದೆ ನೋಡಿ.