ಥೈಲ್ಯಾಂಡ್‌ನಲ್ಲಿ ಚೀನಾ ಬೆಂಬಲಿತ ಹೈಸ್ಪೀಡ್ ರೈಲು ಮಾರ್ಗದಲ್ಲಿ ಇಂದು ಬುಧವಾರ ರೈಲಿನ ಮೇಲೆ ನಿರ್ಮಾಣ ಸ್ಥಳದಲ್ಲಿದ್ದ ಕ್ರೇನ್ ಬಿದ್ದು, ರೈಲು ಹಳಿತಪ್ಪಿ 22 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ 55 ಜನರು ಗಾಯಗೊಂಡರು ಎಂದು ನಖೋನ್ ರಾಟ್ಚಸಿಮಾ ಪ್ರಾಂತ್ಯದ ಸ್ಥಳೀಯ ಪೊಲೀಸ್ ಮುಖ್ಯಸ್ಥ ಥಚ್ಚಪೋನ್ ಚಿನ್ನಾವೊಂಗ್ AFP ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ರಾಜಧಾನಿ ಬ್ಯಾಂಕಾಕ್‌ನ ಈಶಾನ್ಯದಲ್ಲಿರುವ ನಖೋನ್ ರಾಟ್ಚಸಿಮಾದಲ್ಲಿ ಹೈಸ್ಪೀಡ್ ರೈಲು ಜಾಲವನ್ನು ನಿರ್ಮಿಸಲು ಬಳಸಲಾಗುತ್ತಿದ್ದ ಕ್ರೇನ್ ರೈಲಿನ ಮೇಲೆ ಬಿದ್ದು ಈ ದುರ್ಘಟನೆ ಸಂಭವಿಸಿದೆ. ವಿಡಿಯೋ ಇಲ್ಲಿದೆ ನೋಡಿ.