ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಮಹತ್ವದ್ದು. ತನಗೆ ಎಷ್ಟೇ ಕಷ್ಟ, ನೋವಾದರೂ ತನ್ನ ಮಕ್ಕಳಿಗೆ ಮಾತ್ರ ಏನೇ ತೊಂದರೆಯಾಗದಂತೆ ಸಾಕಿ ಸಲುಹುತ್ತಾರೆ.
ತನ್ನ ಮಗನ ಶ್ರೇಯಸ್ಸಿಗಾಗಿ ಎಲ್ಲವನ್ನೂ ತ್ಯಾಗ ಮಾಡುತ್ತಾರೆ. ಈ ಮಾತು ಇದೀಗ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರ ತಾಯಿಯ ವಿಚಾರದಲ್ಲೂ ಕೇಳಿಬರುತ್ತಿದೆ.
ಒಂದು ಸಣ್ಣ ಹಳ್ಳಿಯಿಂದ ಬಂದು ಅಚ್ಚರಿ ರೀತಿಯಲ್ಲಿ ಕ್ರಿಕೆಟ್ ನಲ್ಲಿ ಹೆಸರು ಮಾಡುತ್ತಿರುವ ವೈಭವ್ ಸೂರ್ಯವಂಶಿ ಹಿಂದೆ ಅವರ ಕುಟುಂಬದ ಅಪಾರ ಪರಿಶ್ರಮ ಮತ್ತು ತ್ಯಾಗದ ಸ್ಪೂರ್ತಿದಾಯಕ ಕಥೆ ಇದೆ.
ವೈಭವ್ ಸೂರ್ಯವಂಶಿ ಬಾಲ್ಯದ ತರಬೇತುದಾರ ಮನೀಶ್ ಓಜಾ ಈಗ ಬಾಲಕನ ಆರಂಭಿಕ ಕ್ರೀಡಾ ಪ್ರಯಾಣದ ವಿವರಗಳನ್ನು ಹಂಚಿಕೊಂಡಿದ್ದಾರೆ.
ವೈಭವ್ ಸೂರ್ಯವಂಶಿಯ ಬೆನ್ನೆಲುಬು ಆಗಿ ನಿಂತು ಅಸಾಧಾರಣವಾಗಿ ಬೆಳೆಸಿದ ಅವರ ತಾಯಿ ಆರತಿಯ ಕೊಡುಗೆಗಳನ್ನು ನೆನಪಿಸಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.