ನಾನು ಮುಖ್ಯಮಂತ್ರಿ ಆಗಲು ಪಕ್ಷದೊಳಗೆ ಹೋರಾಟ ಮಾಡುವುದಿಲ್ಲ, ಬಂಡಾಯ ಎಬ್ಬಿಸಿ ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಾನು ಬೀದಿ ಹೋರಾಟಗಾರ, ಹೇಗೆ ಹೋರಾಡಬೇಕೆಂದು ನನಗೆ ಗೊತ್ತು. ನನ್ನ ಹೋರಾಟ ಅಧಿಕಾರಕ್ಕಾಗಿ ಅಲ್ಲ, ಪಕ್ಷದೊಳಗಲ್ಲ; ನನ್ನ ಹೋರಾಟ ಪಕ್ಷದ ಹೊರಗಿದೆ.
ನಾನು ಮೌನವಾಗಿದ್ದೇನೆ ಎಂದು ನನ್ನ ವಿರೋಧಿಗಳು ಭಾವಿಸಿದರೆ ಅದು ಅವರ ಊಹೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.