ಇಂದಿನ ಜಗತ್ತಿನಲ್ಲಿ ಶಿಕ್ಷಣವು ಕೇವಲ ಜ್ಞಾನಾರ್ಜನೆಗೆ ಸೀಮಿತವಾಗದೆ, ಮಾನಸಿಕ ಧೈರ್ಯ ಮತ್ತು ಆತ್ಮಜಾಗೃತಿಗೂ ಒತ್ತು ನೀಡಬೇಕು ಎಂಬ ಅಭಿಪ್ರಾಯವು 14ನೇ ThinkEdu ಅಧಿವೇಶನದಲ್ಲಿ ವ್ಯಕ್ತವಾಯಿತು.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಆಯೋಜಿಸಿದ್ದ ಸಮಾವೇಶದಲ್ಲಿ ಡಾ ಸುಧಾ ಶೇಷಯ್ಯನ್, ಹಿಂದಿನ ಕುಲಪತಿ, ಡಾ.ಎಂ.ಜಿ.ಆರ್. ವೈದ್ಯಕೀಯ ವಿವಿ) ಮತ್ತು ಸ್ವಾಮಿ ಶುದ್ಧಿದಾನಂದ (ಅಧ್ಯಕ್ಷರು, ಅದ್ವೈತ ಆಶ್ರಮ) ಭಾಗವಹಿಸಿದ್ದರು.
‘Educating the Mind, Empowering the Heart’ ಎಂಬ ವಿಷಯದ ಮೇಲೆ ನಡೆದ ಸಂವಾದದಲ್ಲಿ ಈ ವಿಚಾರ ಚರ್ಚೆಗೆ ಬಂದಿದೆ.
ಡಾ ಸುಧಾ ಶೇಷಯ್ಯನ್ ಅವರೊಂದಿಗೆ ನಡೆದ ಸಂವಾದದಲ್ಲಿ ಸ್ವಾಮಿ ಶುದ್ಧಿದಾನಂದ ಮೌಲ್ಯಗಳು ಮತ್ತು ಆತ್ಮಜಾಗೃತಿ ಸಮತೋಲನ ಹೊಂದಿದ ವ್ಯಕ್ತಿತ್ವ ರೂಪುಗೊಳ್ಳಲು ಅತ್ಯಂತ ಮುಖ್ಯವೆಂದು ಪ್ರತಿಪಾದಿಸಿದರು. ವಿಡಿಯೋ ಇಲ್ಲಿದೆ ನೋಡಿ.