ನಾನು ಯಾವ ರಾಹುಕಾಲ, ಗುಳಿಕಾಲ ನೋಡೋದಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಭಾಷಣದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ನಾನು ಯಾವುದೇ ರಾಹುಕಾಲ, ಗುಳಿಕಾಲ ನೋಡುವುದಿಲ್ಲ, ನನಗೆ ಅದರ ಮೇಲೆ ನಂಬಿಕೆಯೂ ಇಲ್ಲ ಎಂದರು.
ಯಾರಾದ್ರೂ ಯುಗಾದಿ- ಶಿವರಾತ್ರಿಯಂದು ಮಾಂಸ ತಿಂತಾರಾ ಎಂದು ಪ್ರಶ್ನಿಸಿದ ಅವರು ನಾನು ತಿಂತೇನೆ ಎಂದರು.
ಈ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಈ ಬಾರಿ ರಾಹುಕಾಲ ಮುಗಿದ ಮೇಲೆ ಬಜೆಟ್ ಮಂಡಿಸಿದ್ರಿ..
ಮುಂದಿನ ಬಾರಿಯೂ ನೀವೇ ಬಜೆಟ್ ಮಂಡಿಸಬೇಕು ಎಂಬ ಉದ್ದೇಶದಿಂದ ಒಳ್ಳೆಯ ಸಮಯ ನೋಡಿ ಬಜೆಟ್ ಮಂಡಿಸಿದ್ರಿ ಎಂದು ಟಾಂಗ್ ನೀಡಿದರು. ವಿಡಿಯೋ ಇಲ್ಲಿದೆ ನೋಡಿ.