ಪ್ರಯಾಣಿಕ ಬಸ್ ವೊಂದು ಪದ್ಮಾ ನದಿಗೆ ಉರುಳಿ ಬಿದ್ದು 40ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಘಟನೆ ಮಾರ್ಚ್ 25 ಬುಧವಾರ ಬಾಂಗ್ಲಾದೇಶದಲ್ಲಿ ನಡೆದಿದೆ.
ನಿನ್ನೆ ಬಾಂಗ್ಲಾದೇಶದ ದೌಲತ್ಡಿಯಾ ಘಾಟ್‌ನಲ್ಲಿ ಪದ್ಮಾ ನದಿಯಲ್ಲಿ ಈ ದುರಂತ ಸಂಭವಿಸಿದ್ದು, ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ.
ಕೆಂಪು ಬಣ್ಣದ ಖಾಸಗಿ ಪ್ರಯಾಣಿಕ ಬಸ್ ನಿಯಂತ್ರಣ ತಪ್ಪಿ ನದಿಗೆ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೃಹತ್ ಸಾರಿಗೆ ಧೋಣಿಯನ್ನು (Ferry) ಏರುವ ವೇಳೆ ಬಸ್ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.