ಶೀಘ್ರದಲ್ಲೇ ದೇಶಕ್ಕೆ ದೊಡ್ಡ 'ಆರ್ಥಿಕ ಆಘಾತ' ಎದುರಾಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ಆದರೆ 'ಅದಾನಿ, ಅಂಬಾನಿ ಅಥವಾ ಮೋದಿ'ಗೆ ಅದು ಎಫೆಕ್ಟ್ ಆಗುವುದಿಲ್ಲ, ಬದಲಾಗಿ ಯುವಕರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ರಾಯ್‌ಬರೇಲಿಯಲ್ಲಿ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, "ಮುಂದೆ ತುಂಬಾ ಕಠಿಣಾತಿಕಠಿಣ ದಿನಗಳು ಬರುತ್ತವೆ" ಎಂದು ವ್ಯಾಪಾರಿಗಳಿಗೆ ಎಚ್ಚರಿಸಿದರು.
ಹಲವು ವರ್ಷಗಳಿಂದ ನಾವು ನೋಡಿರದ ದೊಡ್ಡ ಆರ್ಥಿಕ ಆಘಾತ ಎದುರಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.