ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ, ಒಗ್ಗಟ್ಟು ಮತ್ತು ಸಹಕಾರಕ್ಕಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ ಅವರಿಗೆ ಭಾನುವಾರ ಮನವಿ ಮಾಡಿದ್ದಾರೆ.
ಅಂತಾರಾಜ್ಯ ಜಲ ವಿವಾದಗಳ ಕಾಲ ಮುಗಿದುಹೋಗಿದೆ ಎಂದು ಪ್ರತಿಪಾದಿಸಿದ ಸಿಎಂ, ಸುಪ್ರೀಂ ಕೋರ್ಟ್ ರೂಪಿಸಿರುವ ಕಾನೂನು ಚೌಕಟ್ಟಿನ ಮಿತಿಯಲ್ಲೇ ಕರ್ನಾಟಕ ಕಾರ್ಯನಿರ್ವಹಿಸುತ್ತಿದೆ.
ಈ ಕಾನೂನು ಚೌಕಟ್ಟಿನ ಪ್ರಕಾರ, ಕರ್ನಾಟಕವು ಪ್ರತಿ ವರ್ಷ ತಮಿಳುನಾಡಿಗೆ 177 ಟಿಎಂಸಿ ಕಾವೇರಿ ನೀರನ್ನು ಬಿಡುಗಡೆ ಮಾಡುವುದು ಕಡ್ಡಾಯವಾಗಿದೆ ಎಂದರು.
ಈ ಹೇಳಿಕೆಗೆ ಡಿಎಂಕೆ ವಕ್ತಾರ ಟಿ.ಕೆ.ಎಸ್. ಇಳಂಗೋವನ್ ಸೋಮವಾರ ಪ್ರತಿಕ್ರಿಯಿಸಿದರು.
"ಒಂದು ವೇಳೆ ಅವರು ಮೇಕೆದಾಟು ಅಣೆಕಟ್ಟನ್ನು ನಿರ್ಮಿಸಿದರೂ, ತಮಿಳುನಾಡಿಗೆ ಸೂಕ್ತ ಪ್ರಮಾಣದ ನೀರು ಬಿಡುಗಡೆಯಾಗುವುದನ್ನು ಖಚಿತಪಡಿಸಿಕೊಳ್ಳಬೇಕು" ಎಂದು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.