ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಮಿಳುನಾಡು ಸಚಿವರೊಬ್ಬರು ಕಾಡಾನೆ ಮತ್ತು ಹುಲಿಯನ್ನು ಬೆನ್ನಟ್ಟಿದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ, ತಮಿಳುನಾಡಿನ ಸಚಿವ ವನ್ನಿ ಅರಸು ಅವರು ಕಾಡಿನಲ್ಲಿ ವನ್ಯಜೀವಿಗಳ ಹಿಂದೆ ಓಡುತ್ತಿರುವುದು ಮತ್ತು ಅವರ ಹಿನ್ನೆಲೆಯಲ್ಲಿ ತಮಿಳು ಹಾಡು ಕೇಳಿಬರುತ್ತಿರುವುದು ಕಂಡುಬಂದಿದೆ.
ಅಷ್ಟೇ ಅಲ್ಲದೆ, ವಾಹನದ ಬಾನೆಟ್ ಮೇಲೆ ರಾಜನಂತೆ ಕುಳಿತು ಪೋಸ್ ನೀಡಿರುವುದೂ ವಿಡಿಯೋದಲ್ಲಿದೆ.
ಈ ಘಟನೆಯನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.