ಭಾರತದ ಸ್ವದೇಶಿ ಬಹುಪಯೋಗಿ ಯುದ್ಧನೌಕೆ ‘ಐಎನ್ಎಸ್ ಸಮರ್ಥಕ್’ (INS Samarthak) ಅನ್ನು ಕಾರವಾರದ ನೌಕಾನೆಲೆಯಲ್ಲಿ ಶುಕ್ರವಾರ ಲೋಕಾರ್ಪಣೆಗೊಳಿಸಲಾಗಿದೆ.
ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಯುದ್ಧ ನೌಕೆಯನ್ನು ದೇಶಕ್ಕೆ ಸಮರ್ಪಿಸಿದರು.
ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್, ಹಿರಿಯ ನೌಕಾಪಡೆ ಮತ್ತು ರಕ್ಷಣಾ ಅಧಿಕಾರಿಗಳು, ಎಲ್&ಟಿ ಸಂಸ್ಥೆಯ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಎಲ್&ಟಿ ಸಂಸ್ಥೆಯೇ ಐಎನ್ಎಸ್ ಸಮರ್ಥಕ್ ಅನ್ನು ವಿನ್ಯಾಸಗೊಳಿಸಿ ನಿರ್ಮಿಸಿದೆ.
ನೌಕೆಯ ಒಟ್ಟು ಬಿಡಿಭಾಗಗಳು ಮತ್ತು ತಂತ್ರಜ್ಞಾನದಲ್ಲಿ ಶೇ.70ಕ್ಕೂ ಹೆಚ್ಚು ಪಾಲು ಸ್ವದೇಶಿ ಉತ್ಪನ್ನಗಳಾಗಿವೆ. ವಿಡಿಯೋ ಇಲ್ಲಿದೆ ನೋಡಿ.