ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಮಾಧ್ಯಮಗಳಿಗೆ ಬರೆದ ಪತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಯತೀಂದ್ರ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿದರು.
ಅರಮನೆ ಮಂಡಳಿ ಮತ್ತು ಅರಮನೆ ಹಾಗೂ ಅದಕ್ಕೆ ಸೇರಿದ ಜಾಗ ಸರ್ಕಾರದ ಒಡೆತನದಲ್ಲಿದ್ದರೂ, ಅವರಿಗೆ ಉಳಿದುಕೊಳ್ಳಲು ಒಂದಿಷ್ಟು ಜಾಗ ಕೊಟ್ಟಿದ್ದೇವೆ.
ನಾವು ಅಂಬಾರಿಯನ್ನು ಉಚಿತವಾಗಿ ಪಡೆಯುತ್ತಿಲ್ಲ. ಅಂಬಾರಿಗೂ ಸರ್ಕಾರ ದುಡ್ಡು ಕೊಡುತ್ತದೆ. ಹೀಗಿದ್ದರೂ ಅವರಿಗೆ ಸೂಕ್ತ ಗೌರವ ನೀಡಲಾಗುತ್ತಿದೆ ಎಂದು ಯತೀಂದ್ರ ಹೇಳಿದರು.
ತೀವ್ರ ಅಸಮಾಧಾನ ಹೊರಹಾಕಿರುವ ಪ್ರಮೋದದೇವಿ ಒಡೆಯರ್, ಈ ಬಗ್ಗೆ ನಾಲ್ಕು ಪುಟಗಳ ಸುದೀರ್ಘ ಪತ್ರ ಬರೆದಿದ್ದರು.
ದಸರಾ ಆಯೋಜನೆಯಲ್ಲಿ ಲೋಪಗಳಾಗಿರುವುದನ್ನು ಖಂಡಿಸಿರುವ ಪ್ರಮೋದಾದೇವಿ, ವಿವಿಧ ಇಲಾಖೆಗಳ ಅಧಿಕಾರಿಗಳ ನಡೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.