ರಾಜ್ಯದಲ್ಲಿ ನಂದಿನ ಹಾಲಿನ ದರ ಪ್ರತಿ ಲೀಟರ್ಗೆ 8 ರೂಪಾಯಿ ಹೆಚ್ಚಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೆಚ್ಚಿಗೆ ಮಾಡಲಾಗುವ 8 ರೂಪಾಯಿಯಲ್ಲಿ 7 ರೂಪಾಯಿ ಹಾಲು ಉತ್ಪಾದಕರಿಗೆ ಮತ್ತು 1 ರೂಪಾಯಿ ಕೆಎಂಎಫ್ ಗೆ ನೀಡಲಾಗುವುದು.
ಪರಿಷ್ಕೃತ ದರ ನವೆಂಬರ್ 1 ರಿಂದಲೇ ಜಾರಿಯಾಗಲಿದೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದರು. ವಿಡಿಯೋ ಇಲ್ಲಿದೆ ನೋಡಿ.