ಭಾರತೀಯರು ಕಠಿಣ ಪರಿಶ್ರಮ ಪಡಲು ಬಯಸುತ್ತಾರೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಡಚ್ ಉದ್ಯಮ ನಾಯಕರಿಗೆ ಹೇಳಿದರು.
ಭಾರತವನ್ನು ಹೂಡಿಕೆ ತಾಣವಾಗಿ ಪರಿಚಯಿಸುವ ಕಾರ್ಯಕ್ರಮದಲ್ಲಿ ಪಿಯೂಷ್ ಗೋಯಲ್ ಮಾತನಾಡಿದರು.
ಭಾರತದಲ್ಲಿ ಯಾರೂ ನಿಮಗೆ 'ಸಮಯ ಐದು ಗಂಟೆಯಾಯಿತು' ಎಂದು ಹೇಳುವುದಿಲ್ಲ, ಮತ್ತು ವೀಕೆಂಡ್ ಬಂದಿದೆ ಎಂದು ನಿಮಗೆ ಇಲ್ಲಿ ಯಾವೂ ನೆನಪಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಈಮಧ್ಯೆ, ದೀರ್ಘಕಾಲ ಕೆಲಸ ಮಾಡುವುದು ಭಾರತದ ಶಕ್ತಿ ಎಂದು ಹೇಳಿದ್ದಕ್ಕಾಗಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರವಾಗಿ ಟೀಕಿಸಿದ್ದಾರೆ.
"ಜನರು ಮೌಲ್ಯ ಸರಪಳಿಯಲ್ಲಿ (value chain) ಮೇಲಕ್ಕೆ ಏರಬೇಕೆಂದು ನೀವು ಬಯಸುವುದಾದರೆ, ಅದಕ್ಕೆ ಪೂರಕವಾದ ಪರಿಸರ ವ್ಯವಸ್ಥೆಯನ್ನು (ecosystem) ಸೃಷ್ಟಿಸಿ," ಎಂದು ಖರ್ಗೆ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.