ಬೆಂಗಳೂರು ಎಚ್‌ಎಎಲ್ ಘಟಕದಿಂದ ಶುಕ್ರವಾರ ಭಾರತೀಯ ವಾಯುಪಡೆ ಹಾಗೂ ಪವನ್ ಹನ್ಸ್‌ಗೆ ವಿವಿಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಹಸ್ತಾಂತರಿಸಲಾಯಿತು.
ಎಲ್‌ಸಿಎ ಎಫ್‌ಒಸಿ ತರಬೇತಿ ವಿಮಾನವಾದ ತೇಜಸ್ ತರಬೇತಿ ವಿಮಾನಗಳು, ಎಚ್‌ಟಿಟಿ-40 ತರಬೇತಿ ವಿಮಾನಗಳು ಹಾಗೂ ಧ್ರುವ ಎನ್‌ಜಿ ಹೆಲಿಕಾಪ್ಟರ್‌ಗಳನ್ನು ಹಸ್ತಾಂತರಿಸಲಾಯಿತು.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಮತ್ತು IAF ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಹಸ್ತಾಂತರ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಈ ವಿಮಾನಗಳ ಹಸ್ತಾಂತರವು ಭಾರತದ ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಬೆಳವಣಿಗೆಯಾಗಿದೆ.
ಭಾರತೀಯ ವಾಯುಪಡೆಯ ತರಬೇತಿ ಹಾಗೂ ಕಾರ್ಯಾಚರಣಾ ಸಾಮರ್ಥ್ಯಕ್ಕೆ ಈ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಬಳಕೆಯಾಗಲಿವೆ.
ಭಾರತೀಯ ವಾಯುಪಡೆಗೆ LCA MK 1A ವಿಮಾನ ಡೆಲಿವರಿ ಕುರಿತು ಪ್ರಮುಖ ವಿವರಗಳನ್ನು HAL ಅಧ್ಯಕ್ಷ ರವಿ ಕೆ ಹಂಚಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.