ವಿಶ್ವಸಂಸ್ಥೆಯಲ್ಲಿ ತಕ್ಷಣವೇ ರಚನಾತ್ಮಕ ಸುಧಾರಣೆಗಳು ಆಗಬೇಕಾದ ಅಗತ್ಯವಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಬಲವಾಗಿ ಪ್ರತಿಪಾದಿಸಿದ್ದಾರೆ.
ಅಲ್ಲದೆ, ಈ ಸುಧಾರಣೆಗಳನ್ನು ವಿರೋಧಿಸುತ್ತಿರುವ ದೇಶಗಳ ನಿಲುವನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.
ವಿಶ್ವಸಂಸ್ಥೆಯ ಮಹಾಸಭೆಯ (UNGA) ನೇಪಥ್ಯದಲ್ಲಿ ನಡೆದ ಪ್ರಮುಖ ಜಾಗತಿಕ ಸಭೆಯೊಂದರಲ್ಲಿ ಪಾಲ್ಗೊಂಡು ಎಸ್. ಜೈಶಂಕರ್ ಮಾತನಾಡಿದರು.
"ಯಾರು ವಿಶ್ವಸಂಸ್ಥೆಯ ಸುಧಾರಣೆಯನ್ನು ತಡೆಯುತ್ತಿದ್ದಾರೋ, ಅವರಿಗೆ ಈ ಜಾಗತಿಕ ಸಂಸ್ಥೆಯ ಬಗ್ಗೆ ನಿಜವಾದ ಕಾಳಜಿ ಅಥವಾ ಗೌರವ ಇಲ್ಲ.
ಬದಲಿಗೆ, ಅವರು ತಮ್ಮದೇ ಆದ ಪ್ರಭಾವ ಮತ್ತು ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಈ ಸಂಸ್ಥೆಯನ್ನು ಕೇವಲ ಒಂದು ಸಾಧನವಾಗಿ ಬಳಸಿಕೊಳ್ಳುತ್ತಿದ್ದಾರೆ" ಎಂದು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.