1987ರಲ್ಲಿ ತೆರೆಕಂಡ ಅಂಬರೀಶ್ ಅಭಿನಯದ ಒಲವಿನ ಉಡುಗೊರೆ ಚಿತ್ರವು ಆ ಕಾಲಕ್ಕೆ ಪ್ರೇಮಿಗಳ ಫೇವರಿಟ್ ಚಿತ್ರವಾಗಿತ್ತು. ಚಿತ್ರದಲ್ಲಿ ಅಂಬರೀಶ್ ಪ್ರೇಮಿಯ ಪಾತ್ರದಲ್ಲಿ ಕಾಣಿಸಿಕೊಂಡರೆ ಅವರ ಪ್ರೇಯಸಿಯಾಗಿ ನಟಿ ಮಂಜುಳಾ ಶರ್ಮಾ ಅವರು ಅಭಿನಯಿಸಿದ್ದರು. ಪ್ರಮುಖ ಪಾತ್ರವೊಂದರಲ್ಲಿ ನಟ ರಾಮಕೃಷ್ಣ ಅವರು ಅಭಿನಯಿಸಿದ್ದರು. ಚಿತ್ರವನ್ನು ಲಕ್ಷ್ಮೀ ಚಿತ್ರಾಲಯ ಸಂಸ್ಥೆ ನಿರ್ಮಾಣ ಮಾಡಿತ್ತು.