ಪವನ್ ಕುಮಾರ್ ಅವರ ಯೂಟರ್ನ್ ಚಿತ್ರದ ಟ್ರೈಲರ್
ಲೂಸಿಯಾ ಖ್ಯಾತಿಯ ಪವನ್ ಕುಮಾರ್ ನಿರ್ದೇಶನದ ಯೂಟರ್ನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ಗೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಬಿಡುಗಡೆಯಾದ 2 ದಿನದಲ್ಲಿ 2 ಲಕ್ಷ ಮಂದಿ ಟ್ರೈಲರ್ ವೀಕ್ಷಿಸಿದ್ದಾರೆ. ಟ್ರೈಲರ್ ವೀಕ್ಷಿಸಿದ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಹಾಗೂ ನಾಗಚೈತನ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರ ಮಿಸ್ಟರಿ ಥ್ರಿಲ್ಲರ್ ಕತೆ ಹೊಂದಿದೆ.