ಅಜಯ್ ರಾವ್ ಅಮೂಲ್ಯ ಜೋಡಿಯ 'ಕೃಷ್ಣ ರುಕ್ಕು' ಟ್ರೇಲರ್
ನಟ ಅಜಯ್ ಕುಮಾರ್ ಅವರು 'ಕೃಷ್ಣ'ನಾಗಿ ನಟಿಸಿರುವ ಸಿನೆಮಾಗಳು ಯಶಸ್ಸು ತಂದುಕೊಟ್ಟಿರುವುದರಿಂದ ಮತ್ತೆ ಆ ಹೆಸರಿನಲ್ಲೇ ಸಿನೆಮಾದಲ್ಲಿ ನಟಿಸಿದ್ದಾರೆ. ಅಮೂಲ್ಯ ಜೊತೆಗೆ ನಟಿಸಿರುವ 'ಕೃಷ್ಣ ರುಕ್ಕು' ಟ್ರೇಲರ್ ಬಿಡುಗಡೆಯಾಗಿದೆ. ಅನಿಲ್ ಕುಮಾರ್ ನಿದೇಶನದ ಈ ಚಿತ್ರಕ್ಕೆ ಶ್ರೀಧರ್ ವಿ ಸಂಭಾರಂ ಸಂಗೀತ ನೀಡಿದ್ದು, ಟ್ರೇಲರ್ ನಲ್ಲಿ ಅಮೂಲ್ಯ ಬಜಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದೆನಿಸುತ್ತದೆ.