ಡೈರಿ ಆಫ್ ಎ ಚೇಂಬರ್ ಮೇಡ್ ಚಿತ್ರದ ಟ್ರೈಲರ್
ಡೈರಿ ಆಫ್ ಎ ಚೇಂಬರ್ ಮೇಡ್ ಚಿತ್ರ ಸೆಲೆಸ್ಟಿನ್ ಎಂಬ ಸುಂದರ ಯುವತಿಯ ಕುರಿತ ಚಿತ್ರವಾಗಿದ್ದು, ಜೀವನ ನಿರ್ವಹಣೆಗಾಗಿ ಪ್ಯಾರಿಸ್ ಗೆ ಬರುವ ಈಕೆ ಓರ್ವ ಮನೆ ಕೆಲಸದಾಕೆಯಾಗಿ ಕೆಲಸಕ್ಕೆ ಸೇರುತ್ತಾಳೆ. ಆಕೆಯ ಸೌಂದರ್ಯವೇ ಆಕೆ ಒಂದರ್ಥದಲ್ಲಿ ಎದುರಾಳಿಯಿಗಿದ್ದು, ಆಕೆಯ ಸೌಂದರ್ಯಕ್ಕೆ ಮಾರುಹೋಗುವ ಮನೆ ಮಾಲೀಕನ ಕಿರುಕುಳ ಒಂದೆಡೆಯಾದರೆ ಮನೆ ಮಾಲಕಿಯದ್ದು ಮತ್ತೊಂದು ರೀತಿಯ ಕಿರುಕುಳ. ಇಂತಹ ಕ್ಲಿಷ್ಟಕರ ಸಮಸ್ಯೆಗಳನ್ನು ಸೆಲೆಸ್ಟಿನ್ ಹೇಗೆ ಎದುರಿಸುತ್ತಾಳೆ ಎನ್ನುವುದೇ ಡೈರಿ ಆಫ್ ಎ ಚೇಂಬರ್ ಮೇಡ್ ಚಿತ್ರದ ತಿರುಳು. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರವು ಶುಕ್ರವಾರ ಪ್ರದರ್ಶನ ಕಾಣುತ್ತಿದೆ.