"ಅಂಡರ್ ಹೆವೆನ್" ಚಿತ್ರದ ಟ್ರೈಲರ್
ಪರಸ್ಪರ ಅನ್ಯೋನ್ಯವಾಗಿರುವ ಇಬ್ಬರು ಸಹೋದರರು ಒಂದೇ ಹುಡುಗಿಯನ್ನು ಪ್ರೀತಿಸುತ್ತಾರೆ. ಈ ವಿಚಾರ ಪರಸ್ಪರರಿಗೆ ತಿಳಿದಾಗ ಉಂಟಾಗುವ ತಳಮಳ ಮತ್ತು ಇದೇ ಪ್ರೀತಿ ಮುಂದೆ ಅವರ ಜೀವನದಲ್ಲಿ ಎಂತಹು ಬಿರುಗಾಳಿಯನ್ನೇ ಬಿಸಿಸುತ್ತದೆ ಎಂಬ ತಿರುಳನ್ನು ಹೊಂದಿರುವ ಚಿತ್ರವೇ "ಅಂಡರ್ ಹೆವೆನ್". ಅಂಡರ್ ಹೆವೆನ್ ಚಿತ್ರದ ಮೂಲ ಕಜಕಿಸ್ತಾನವಾಗಿದ್ದು, ಚಿತ್ರದ ಮೂಲ ಹೆಸರು ಅಸ್ಮನ್ ಅಲ್ಡಿಂಡ (Asman aldynda) 2015ರಲ್ಲಿ ಚಿತ್ರ ಬಿಡುಗಡೆಯಾಗಿದೆ. ಇದೀಗ ಬೆಂಗಳೂರು ಆಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶುಕ್ರವಾರ (29-01-2016) ಪ್ರದರ್ಶನಕಾಣುತ್ತಿದೆ.