ಸುಲ್ತಾನ್ ಎರಡನೆ ಟೀಸರ್ ವೈರಲ್
ಸಲ್ಮಾನ್ ಖಾನ್ ಮತ್ತು ಅನುಷ್ಕಾ ಶರ್ಮಾ ನಟನೆಯ 'ಸುಲ್ತಾನ್' ಸಿನೆಮಾದ ಎರಡನೇ ಟೀಸರ್ ಈಗ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲಿ ಅಬ್ಬಾಸ್ ಜಫರ್ ಕಥೆ ಬರೆದು ನಿರ್ದೇಶಿಸಿರುವ ಈ ಸಿನೆಮಾದ ನೂತನ ಟೀಸರ್ ಬಿಡುಗಡೆಯಾದ ಮೂರು ದಿನಗಳಲ್ಲಿ ೧೬ ಲಕ್ಷಕ್ಕೂ ಹೆಚ್ಚು ಜನ ಇದನ್ನು ಯುಟೂಬಿನಲ್ಲಿ ವೀಕ್ಷಿಸಿದ್ದಾರೆ. ಈ ಟೀಸರ್ ನಲ್ಲಿ ಅನುಷ್ಕಾ ಶರ್ಮಾ ಅವರ ಪಾತ್ರವನ್ನು ಪರಿಚಯಿಸಿದ್ದು, ಅವರ ಕುಸ್ತಿಯ ಪಟ್ಟುಗಳನ್ನು ವೀಕ್ಷಿಸಬಹುದಾಗಿದೆ.