ಡ್ಯಾನ್ ಬ್ರೌನ್ ಅವರ ಜನಪ್ರಿಯ ಕಾದಂಬರಿ 'ಇನ್ಫರ್ನೋ' ಕಾದಂಬರಿ ಆಧಾರಿತ ಅದೇ ಹೆಸರಿನ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ವಿಶ್ವ ವಿಖ್ಯಾತ ಆಸ್ಕರ್ ಪ್ರಶಸ್ತಿ ವಿಜೇತ ನಟ ಟಾಮ್ ಹ್ಯಾಂಕ್ಸ್ ಜೊತೆಗೆ ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಕೂಡ ನಟಿಸಿರುವುದು ವಿಶೇಷ. ಸಿನೆಮಾ ಅಕ್ಟೋಬರ್ ೨೮ಕ್ಕೆ ಬಿಡುಗಡೆಯಾಗಲಿದೆ.