ಸುದೀಪ್, ಉಪೇಂದ್ರ ಅಭಿನಯದ ಮುಕುಂದಾ ಮುರಾರಿ ಚಿತ್ರದ ಟ್ರೈಲರ್
ನಟ ಉಪೇಂದ್ರ ಹಾಗೂ ಸುದೀಪ್ ಅಭಿನಯದ ಮುಕುಂದಾ ಮುರಾರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರವನ್ನು ಅಧ್ಯಕ್ಷ ಖ್ಯಾತಿಯ ನಂದಕಿಶೋರ್ ನಿರ್ದೇಶಿಸಿದ್ದಾರೆ. ಹಿಂದಿಯ ಓ ಮೈಗಾಡ್ ಚಿತ್ರದ ರಿಮೇಕ್ ಆಗಿರುವ ಈ ಚಿತ್ರದಲ್ಲಿ ಕೃಷ್ಣನ ಪಾತ್ರದಲ್ಲಿ ನಟ ಸುದೀಪ್ ಹಾಗೂ ನಾಸ್ತಿಕನ ಪಾತ್ರದಲ್ಲಿ ನಟ ಉಪೇಂದ್ರ ಅಭಿನಯಿಸಿದ್ದಾರೆ.