ರಾಜಮೌಳಿ ತಂದೆ ವಿಜೇಂದ್ರಪ್ರಸಾದ್ ನಿರ್ದೇಶನದ ಶ್ರೀವಲ್ಲಿ ಚಿತ್ರದ ಟೀಸರ್
ಬ್ಲಾಕ್ ಬಸ್ಟರ್ ಚಿತ್ರಗಳಾದ ಬಾಹುಬಲಿ ಮತ್ತು ಭಜರಂಗಿ ಬಾಯಿಜಾನ್ ಚಿತ್ರಗಳಿಗೆ ಕಥೆ ಬರೆದಿದ್ದ ವಿ ವಿಜೇಂದ್ರ ಪ್ರಸಾದ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಶ್ರೀವಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಶ್ರೀವಲ್ಲಿ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರಜತ್ ಮತ್ತು ನೇಹಾ ನಟಿಸಿದ್ದಾರೆ.