ಶ್ರದ್ಧಾ ಶ್ರೀನಾಥ್ ನಟನೆಯ 'ವಿಕ್ರಂ ವೇಧ' ತಮಿಳು ಸಿನೆಮಾ ಟ್ರೇಲರ್
ಕನ್ನಡ ನಟಿ ಶ್ರದ್ಧಾ ಶ್ರೀನಾಥ್ ಸೇರಿದಂತೆ ಆರ್ ಮಾಧವನ್, ವಿಜಯ್ ಸೇತುಪತಿ ನಟಿಸಿರುವ 'ವಿಕ್ರಂ ವೇಧ' ತಮಿಳು ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಮತ್ತೊಬ್ಬ ಕನ್ನಡ ನಟ ಅಚ್ಯುತ್ ಕುಮಾರ್ ಕೂಡ ನಟಿಸಿರುವ ಈ ಭೂಗತ ಲೋಕದ ಕಥೆಯುಳ್ಳ ಸಿನೆಮಾವನ್ನು ಪುಷ್ಕರ್-ಗಾಯತ್ರಿ ನಿರ್ದೇಶಿಸಿದ್ದಾರೆ. ಸಿನೆಮಾ ಜುಲೈ ೭ಕ್ಕೆ ಬಿಡುಗಡೆಯಾಗಲಿದೆ.