ಮನಮುಟ್ಟುವ ಡೈಲಾಗ್ನಿಂದ ಕೂಡಿದ ದುನಿಯಾ 2 ಚಿತ್ರದ ಟೀಸರ್
ದುನಿಯಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಲೂಸ್ ಮಾದ ಯೋಗಿ ಇದೀಗ ದುನಿಯಾ-2 ಚಿತ್ರದಲ್ಲಿ ಅಭಿನಯಿಸುತ್ತಿದ್ದು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನಾಯಕಿ ಹಿತಾ ಚಂದ್ರಶೇಖರ್ ಹಾಗೂ ನಟ ಯೋಗಿ ನಡುವಿನ ಮನಮುಟ್ಟುವ ಡೈಲಾಗ್ ನಿಂದ ಕೂಡಿದೆ. ಚಿತ್ರವನ್ನು ಹರಿ ಎಂಬುವರು ನಿರ್ದೇಶಿಸುತ್ತಿದ್ದಾರೆ.