3 ಈಡಿಯಟ್ಸ್ ಚಿತ್ರ ಸ್ಪ್ಯಾನಿಷ್ ಭಾಷೆಗೆ ರಿಮೇಕ್; ಚಿತ್ರದ ಟ್ರೈಲರ್
ಬಾಲಿವುಡ್ ಬ್ಲಾಕ್ ಬಸ್ಟರ್ 3 ಈಡಿಯಟ್ಸ್ ಚಿತ್ರ ಸ್ಪ್ಯಾನಿಷ್ ಭಾಷೆಯಲ್ಲಿ ರಿಮೇಕ್ ಆಗುತ್ತಿದ್ದು ಸ್ಪ್ಯಾನಿಷ್ 3 ಇಡಿಯಟ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕಾರ್ಲೋಸ್ ಬೊಲಡೊ ಅವರು ನಿರ್ದೇಶಿಸಿದ್ದಾರೆ. ಹಿಂದಿಯ 3 ಇಡಿಯಟ್ಸ್ ಚಿತ್ರವನ್ನು ರಾಜಕುಮಾರ್ ಹಿರಾನಿ ಅವರು ನಿರ್ದೇಶಿಸಿದ್ದರು. 2009ರಲ್ಲಿ ಚಿತ್ರ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.