ಗಂಡು ಹುಟ್ಟಿದಾಗಿನಿಂದ ಸಾಯುವವರೆಗೂ ಒಂದಲ್ಲ ಒಂದು ರೀತಿಯಲ್ಲಿ ಹೆಣ್ಣಿನ ಮೇಲೆ ಅವಲಂಭಿತನಾಗಿರುತ್ತಾನೆ. ತಾಯಿಯಾಗಿ, ಅಕ್ಕನಾಗಿ, ತಂಗಿಯಾಗಿ, ಅಜ್ಜಿಯಾಗಿ, ಪತ್ನಿಯಾಗಿ ಅಥವಾ ಬೇರಿನ್ನಾವುದೋ ಸಂಬಂಧದೊಂದಿಗೆ ಗಂಡಿನೊಂದಿಗೆ ಆಕೆ ಸದಾ ಬೆಸೆದುಕೊಂಡಿರುತ್ತಾಳೆ. ನಾವು ತಪ್ಪು ಹೆಜ್ಜೆ ಇಟ್ಟಾಗ ಗುರುವಾಗಿ ಅದನ್ನು ತಿದ್ದಿ ತೀಡಿ ನಮ್ಮನ್ನು ಸರಿದಾರಿಗೆ ತರುತ್ತಾಳೆ. ನಾವು ಕಷ್ಟದಲ್ಲಿದ್ದಾಗೆ ತಾಯಿಯಾಗಿ ನಮ್ಮನ್ನು ಸಂತೈಸುತ್ತಾಳೆ. ನಮ್ಮ ಸಂತೋಷದಲ್ಲಿ ತಾನೂ ಒಬ್ಬ ಸಹೋದರಿಯಾಗಿ ಜೊತೆಗೂಡುತ್ತಾಳೆ. ಇಂತಹ ಹೆಣ್ಣಿಗೆ ನಮ್ಮದೊಂದು ಸಲಾಂ.