ಮಾತನಾಡು ಕನ್ನಡ
60ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಕನ್ನಡಿಗರಿಗೆ ಶುಭಾಶಯ ಕೋರುವ ನಿಟ್ಟಿನಲ್ಲಿ ವಿಹಾನ್ ಅಭ್ಯುದಯ ಮತ್ತು ಅವರ ತಂಡ ವಿನೂತನ ವಿಡಿಯೋವೊಂದನ್ನು ಹೊರತಂದಿದ್ದು, ಕನ್ನಡ ಮತ್ತು ಕರ್ನಾಟಕದ ಮಹತ್ವ ಸಾರುವ ಪ್ರಯತ್ನ ಮಾಡಿದ್ದಾರೆ. ಇದನ್ನು ಕೃಷ್ಣ ಸುಜಾನ್ ನಿರ್ದೇಶಿಸಿದ್ದು, ಅಮಿತ್ ಶೆಟ್ಟಿ ಅವರು ಸಾಹಿತ್ಯ ಮತ್ತು ವಿಹಾನ್ ಅಭ್ಯುದಯ ಸಂಗೀತ ನೀಡಿದ್ದಾರೆ.