ಅಂಡರ್ ಕನ್ ಸ್ಟ್ರಕ್ಷನ್ ಚಿತ್ರದ ಟ್ರೈಲರ್
ಅಂಡರ್ ಕನ್ ಸ್ಟ್ರಕ್ಷನ್ ಬಾಂಗ್ಲಾದೇಶದ ಓರ್ವ ಕಟ್ಟಡ ನಿರ್ಮಾಣ ಕೆಲಸ ಮಾಡುವ ಓರ್ವ ಮಹಿಳೆಯ ಕುರಿತಾದ ಚಿತ್ರವಾಗಿದ್ದು, ತನ್ನ ಸಮಾಜದಲ್ಲಿನ ಹಿಂಸೆ ನೋವು, ಲೈಂಗಿಕ ಅಸಮಾನತೆಯನ್ನು ಮೆಟ್ಟಿ ನಿಲ್ಲುವ ಪಾತ್ರದಲ್ಲಿ ನಟಿ ರೋಯಾ ಅವರ ನಟನೆ ಮನೋಜ್ಞವಾಗಿದೆ. ಚಿತ್ರವನ್ನು ಮಹಿಳಾ ಪ್ರಧಾನ ಚಿತ್ರಗಳ ನಿರ್ದೇಶಕ ಎಂದೇ ಖ್ಯಾತಿ ಗಳಿಸಿರುವ ರೊಬಾಯತ್ ಹುಸ್ಸೇನ್ ಅವರು ನಿರ್ದೇಶಿಸಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶುಕ್ರವಾರ ಪ್ರದರ್ಶನ ಕಾಣುತ್ತಿದೆ.