ಟರ್ಕಿ ವಿಫಲ ಸೇನಾ ದಂಗೆ; ಸೇನಾ ಟ್ಯಾಂಕರ್ ಹರಿದೂ ಬದುಕುಳಿದ ಪ್ರತಿಭಟನಕಾರ
ಟರ್ಕಿಯಲ್ಲಿ ಜುಲೈ 15 ರಂದು ವಿಫಲ ಸೇನಾ ದಂಗೆಯ ಸಮಯದಲ್ಲಿ ಪ್ರತಿಭಟನಾ ನಿರತ ನಾಗರಿಕ ಸೇನಾ ಟ್ಯಾಂಕರ್ ಗೆ ಅಡ್ಡ ಬಂದು ಅದು ಮೇಲೆ ಹರಿದರೂ ಬದುಕಿಳಿದ ಘಟನೆಯ ವಿಡಿಯೋ ಲಭ್ಯವಾಗಿದೆ. ಎರಡನೇ ಟ್ಯಾಂಕರ್ ಹರಿದ ಮೇಲೆ ಭುಜಕ್ಕೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ. ಈ ಪ್ರತಿಭಟನಕಾರನನ್ನು ಸಬ್ರಿ ಉನಾಲ್ ಎಂದು ಗುರುತಿಸಲಾಗಿದೆ.