ಶೋ ನಡುವೆ ಪ್ರೇಕ್ಷಕರತ್ತ ನುಗ್ಗಿದ ಕೋಬ್ರಾ... ಮುಂದೆನಾಯ್ತು ನೋಡಿ!
ಕಿಂಗ್ ಕೋಬ್ರಾ ಪ್ರದರ್ಶನದ ವೇಳೆ ಕೋಬ್ರಾ ಹಾವು ಅಚಾನಕ್ ಪ್ರೇಕ್ಷಕರತ್ತ ನುಗ್ಗಿದ್ದು, ಇದರಿಂದ ಭಯಭೀತರಾದ ಪ್ರೇಕ್ಷಕರು ಗಲಿಬಿಲಿಗೊಂಡ ಘಟನೆ ಥಾಯ್ ಲ್ಯಾಂಡ್ ನ ಪುಕೇಟ್ ಬಳಿ ನಡೆದಿದೆ. ಪ್ರದರ್ಶನದಲ್ಲಿ ಹಾವಾಡಿಗ ಅಪಾಯಕಾರಿ ಚಾಲನೆಗಳ ಮೂಲಕ ಹಾವಿಗೆ ಮುತ್ತು ನೀಡುತ್ತಾ ಆಟವಾಡಿಸುತ್ತಾನೆ. ಹಾವಿನಿಂದ ಕಚ್ಚಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಸ್ವಲ್ಪ ಹಿಂದಕ್ಕೆ ಸರಿಯುತ್ತಾನೆ. ಈ ವೇಳೆ ಕೋಬ್ರಾ ಹಾವು ಪ್ರೇಕ್ಷಕರ ಗ್ಯಾಲರಿಗೆ ನುಗ್ಗಿದೆ. ತಕ್ಷಣ ಹಾವಾಡಿಗ ಹಾವನ್ನು ಹಿಂದಕ್ಕೆ ಎಳೆದುಕೊಂಡಿದ್ದು, ದೊಡ್ಡ ಅನಾಹುತ ತಪ್ಪಿದಂತಾಗಿದೆ.