ತೆಲಂಗಾಣದಲ್ಲಿ ಭೀಕರ ರಸ್ತೆ ಅಫಘಾತ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ತೆಲಂಗಾಣದ ನಿಜಾಮಾಬಾದ್ ನ ಕಾಮಾರೆಡ್ಡಿ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಎರಡು ಸರಕು ಸಾಗಣಾ ಲಾರಿಗಳ ನಡುವೆ ಸಿಲುಕಿದ ಕಾರು ಕ್ಷಣ ಮಾತ್ರದಲ್ಲಿ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಒಂದೇ ಕುಟುಂಬದ ಎಲ್ಲ ಐದು ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಆರ್ಮೂರು ಮಂಡಲದ ಆಲೂರು ಗ್ರಾಮದ ಭರತ್ (18), ನಿಕಿತ (19), ಪ್ರವೀಣ್ (42), ಲಕ್ಷ್ಮಣ್ (43) ಮತ್ತು ಹರೀಶ್ (18) ಎಂದು ಗುರುತಿಸಲಾಗಿದೆ.