ಭೀಕರ ದೃಶ್ಯ: ಫೋನಲ್ಲಿ ಮಾತನಾಡುತ್ತಾ 3 ಮಕ್ಕಳ ಮೇಲೆ ಕಾರು ಹರಿಸಿದ ಮಹಿಳೆ
ಫೋನಿನಲ್ಲಿ ಮಾತನಾಡುತ್ತಾ ಮಹಿಳೆಯೊಬ್ಬರು ಪಾರ್ಕಿಂಗ್ ಲಾಟ್ ನಲ್ಲಿ ಆಡುತ್ತಿದ್ದ ಮೂವರು ಮಕ್ಕಳ ಮೇಲೆ ಕಾರು ಹರಿಸಿರುವ ದಾರುಣ ಘಟನೆ ಚೀನಾದಲ್ಲಿ ನಡೆಸಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ಮಕ್ಕಳ ಮೇಲೆ ಕಾರು ಹರಿಸಿದ ಮೇಲೆ ಮಹಿಳೆಗೆ ತನ್ನ ತಪ್ಪಿನ ಹರಿವಾಗಿದ್ದು ಕಾರು ಮಕ್ಕಳ ಮೇಲೆ ಹರಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದೃಷ್ಟವಶಾತ್ ಮಕ್ಕಳ ಮೇಲೆ ಕಾರು ಹರಿದರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.