ಬೃಹತ್ ಗಾತ್ರದ ಅನಕೊಂಡ! ಬ್ರೆಜಿಲ್ ನಲ್ಲಿ ಪತ್ತೆಯಾಯ್ತು 400 ಕೆಜಿ ತೂಕದ ಹಾವು
ಬೃಹತ್ ಗಾತ್ರದ ಅನಕೊಂಡಗಳನ್ನು ಹಾಲಿವುಡ್ ಚಿತ್ರಗಳಲ್ಲಿ ಗ್ರಾಫಿಕ್ಸ್ ಗಳಲ್ಲಿ ನೋಡಿರುತ್ತೇವೆ. ಆದರೆ ಬ್ರೆಜಿಲ್ ನಲ್ಲಿ ಬರೋಬ್ಬರಿ 400 ಕೆಜಿ ತೂಕದ ಭಾರೀ ಗಾತ್ರದ ಅನಕೊಂಡವನ್ನು ಕಟ್ಟಡ ನಿರ್ಮಾಣ ಕಾಮಗಾರಿಯೊಂದರ ವೇಳೆ ಕಾರ್ಮಿಕರು ಪತ್ತೆ ಮಾಡಿದ್ದಾರೆ. ಸುಮಾರು 33 ಅಡಿ ಉದ್ದದ ಈ ಅನಕೊಂಡ ಬ್ರೆಜಿಲ್ ನ ಪಾರಾದ ಅಲ್ಟಿಮಿರಾದಲ್ಲಿ ಪತ್ತೆಯಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.