ವಿಂಡೀಸ್ ವಿಶ್ವಕಪ್ ಗೆಲುವಿನ ಸ್ಪೂರ್ತಿ ಈ ಚಾಂಪಿಯನ್ಸ್ ಡ್ಯಾನ್ಸ್
ಅಂಡರ್ 19, ಮಹಿಳಾ ಮತ್ತು ಪುರುಷರ ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ವಿಶ್ವ ವಿಜೇತವಾಗಿದೆ. ಆದರೆ ವೆಸ್ಟ್ ಇಂಡೀಸ್ ತಂಡದ ಈ ಜೈತ್ರ ಯಾತ್ರೆಗೆ ಸ್ಪೂರ್ತಿಯಾಗಿದ್ದು ಇದೇ ಚಾಂಪಿಯನ್ ಡ್ಯಾನ್ಸ್. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಆಲ್ ರೌಂಡರ್ ಆಟಗಾರ ಡ್ವೇಯ್ನ್ ಬ್ರಾವೋ ಅವರ ನೂತನ ವಿಡಿಯೋ ಆಲ್ಬಮ್ ಚಾಂಪಿಯನ್. ಖ್ಯಾತ ನಿರ್ಮಾಣ ಸಂಸ್ಥೆ ವೇಗಾ ಹೌಸ್ ಈ ವಿಡಿಯೋ ಆಲ್ಬಮ್ ಅನ್ನು ನಿರ್ಮಿಸಿದ್ದು, ಜೋಸೆಫ್ ಫರ್ನಾಂಡೋ ಅವರು ಇದನ್ನು ನಿರ್ದೇಶಿಸಿದ್ದಾರೆ. ಈ ವಿಡಿಯೋ ಆಲ್ಬಮ್ ನಲ್ಲಿ ವೆಸ್ಟ್ ಇಂಡೀಸ್ ತಂಡದ ಆಲ್ ರೌಂಡರ್ ಆಟಗಾರ ಕ್ರೀಡಾಕ್ಷೇತ್ರದಲ್ಲಿ ವಿಂಡೀಸ್ ಖ್ಯಾತಿಗಳಿಸಿರುವ ಆಟಗಾರರನ್ನು ಶ್ಲಾಘಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.