ಇಂಟರ್ ನೆಟ್ ಸೌಲಭ್ಯದಿಂದಾಗಿ ಜಗತ್ತು ತುಂಬಾ ಕಿರಿದಾಗಿ ಕಾಣುತ್ತಿದೆ. ಕೈಯಲ್ಲೊಂದು ಮೊಬೈಲ್ ಇದ್ದರೆ ಜಗತ್ತೇ ಅಂಗೈಯಲ್ಲಿ ಎನ್ನುವ ತಂತ್ರಜ್ಞಾನ, ಅಭಿವ್ಯಕ್ತಿ ಸ್ವಾತಂತ್ರ್ಯದ ದನಿಯಾಗಿರುವ ಸಾಮಾಜಿಕ ತಾಣಗಳು ಮನುಷ್ಯನನ್ನು ಬೆಸೆಯುವ ಕೊಂಡಿಗಳಾಗಿ ಮಾರ್ಪಟ್ಟಿವೆ. ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗ್ರಾಂ ಯಾವುದೇ ಸಾಮಾಜಿಕ ತಾಣವಿರಲಿ ಜಗತ್ತಿನ ಎಲ್ಲಾ ಆಗುಹೋಗುಗಳು ಇಲ್ಲಿ ಜಗಜ್ಜಾಹೀರಾಗುತ್ತವೆ. ಮನುಷ್ಯ ಪರಸ್ಪರ ಮಾತನಾಡುವುದಕ್ಕಿಂತ ಹೆಚ್ಚು ಸಾಮಾಜಿಕ ಜಾಲತಾಣಗಳ ಮೂಲಕ ಸಂವಹನ ನಡೆಸುತ್ತಾನೆ. ಹೀಗೆ ಸಾಮಾಜಿಕ ತಾಣಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿ ಮಾರ್ಪಟ್ಟಿವೆ. ಆದಾಗ್ಯೂ, ಸಾಮಾಜಿಕ ತಾಣಗಳ ಬಳಕೆಗೂ ನೀತಿ ಸಂಹಿತೆ ಇದೆ. ಆದರೆ ಹೆಚ್ಚಿನ ನೆಟಿಜನ್ ಗಳಿಗೆ ಈ ಬಗ್ಗೆ ಅರಿವು ಇರುವುದಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳು ಅಸುರಕ್ಷಿತ ವಾತಾವರಣವನ್ನು ಸೃಷ್ಟಿಸುತ್ತವೆ. ಯಾವುದೇ ಸಾಮಾಜಿಕ ತಾಣಗಳನ್ನು ಬಳಸುವಾಗ ಅವು ನಮ್ಮ ವೈಯಕ್ತಿಕ ಡೈರಿ ಅಲ್ಲ ಎಂಬುದು ನೆನಪಿನಲ್ಲಿಟ್ಟುಕೊಳ್ಳಬೇಕು. ಅಷ್ಟೇ ಅಲ್ಲ, ಪ್ರತಿಯೊಂದು ತಾಣವನ್ನು ಬಳಸುವಾಗ ಆ ತಾಣದ ಉಪಯೋಗ ಮತ್ತು ದುರುಪಯೋಗಗಳ ಬಗ್ಗೆಯೂ ಅರಿವು ಇರಬೇಕು.
ಸಾಮಾಜಿಕ ತಾಣದಲ್ಲಿ ಪಾಲಿಸಬೇಕಾದ ನೀತಿ ಸಂಹಿತೆಗಳು ಹೀಗಿವೆ
-ಅಗತ್ಯವಿದ್ದರೆ ಮಾತ್ರ ಡೈರೆಕ್ಟ್ ಮೆಸೇಜ್ ಕಳಿಸಿ
-140 ಅಕ್ಷರ ಮಿತಿ ಇರುವುದರಿಂದ ಚಿಕ್ಕದಾಗಿ ಚೊಕ್ಕವಾಗಿ ಹೇಳಿ. ಅಷ್ಟೇ ಅಲ್ಲ 140 ಅಕ್ಷರಗಳನ್ನು ಬಳಸಲೇ ಬೇಕೆಂದಿಲ್ಲ
-ಯಾವುದೇ ಕಾರಣಕ್ಕೂ ಇನ್ನೊಂದು ಸಂಸ್ಥೆಯ ಹ್ಯಾಶ್ ಟ್ಯಾಗ್ ಕದಿಯಬೇಡಿ
-ಟ್ವೀಟ್ ಗಳಲ್ಲಿ ಕೀವರ್ಡ್ ಗಳ ಅನಗತ್ಯ ಬಳಕೆ ಬೇಡ
-ಸೆಲೆಬ್ರಿಟಿಗಳ ಟ್ವಿಟರ್ ಅಕೌಂಟ್ ಫಾಲೋ ಮಾಡುವ ಮುನ್ನ ಆ ಅಕೌಂಟ್ ಅಧಿಕೃತವೇ ಎಂಬುದನ್ನು ಗಮನಿಸಿ. ಅಧಿಕೃತ ಅಕೌಂಟ್ ನಲ್ಲಿ ನೀಲಿ ಬಣ್ಣದ ರೈಟ್ ಮಾರ್ಕ್ ಇರುತ್ತದೆ.
ಅಗತ್ಯವಿದ್ದರೆ ಪೋಸ್ಟ್ ಜತೆಗೆ ಫೋಟೋ ಲಗತ್ತಿಸಿ.
-ನಿಮ್ಮ ಪೋಸ್ಟ್ ನ್ನು ನೀವೇ ಲೈಕ್ ಮಾಡುವುದು ಬೇಡ
-ಇನ್ನೊಬ್ಬ ವ್ಯಕ್ತಿಯ ಅನುಮತಿ ಇಲ್ಲದೆ ಯಾವುದೇ ಪೋಸ್ಟ್ ಅಥವಾ ಫೋಟೋಗಳಿಗೆ ಅವರನ್ನು ಟ್ಯಾಗ್ ಮಾಡಬೇಡಿ
-ಆ ಪೋಸ್ಟ್ ಆ ವ್ಯಕ್ತಿಗಳಿಗೆ ಸಂಬಂಧಿಸಿದ್ದಾದರೆ ಮಾತ್ರ ಟ್ಯಾಗ್ ಮಾಡಿ.
ಲೈಕ್ ಮಾಡಿ, ಕಾಮೆಂಟ್ ಮಾಡಿ, ಶೇರ್ ಮಾಡಿ ಎಂದು ಯಾರಲ್ಲಿ ಒತ್ತಡ ಹೇರುವುದಾಗಲೀ, -ವಿನಂತಿ ಮಾಡುವುದಾಗಲೀ ಮಾಡಬಾರದು.
-ಫೇಸ್ ಬುಕ್ ನಲ್ಲಿ ಅವಹೇಳನಾಕಾರಿ ಪೋಸ್ಟ್ ಗಳನ್ನು ಯಾವತ್ತೂ ಹಾಕಬಾರದು
-ನಿಮ್ಮ ವ್ಯಕ್ತಿತ್ವ ವು ಅಲ್ಲಿರುವ ಪೋಸ್ಟ್ ಗಳಲ್ಲಿ ವ್ಯಕ್ತವಾಗುತ್ತಿದೆ ಎಂಬುದು ಗಮನದಲ್ಲಿರಲಿ.
-ಫೇಸ್ ಬುಕ್ ನಿಮ್ಮ ಖಾಸಗಿ ಡೈರಿಯಲ್ಲ, ಅಲ್ಲಿ ಏನು ಹೇಳಬೇಕೋ ಅಷ್ಟನ್ನು ಮಾತ್ರ ಹೇಳಿ
-ಫೇಕ್ ಪ್ರೊಫೈಲ್ ಗಳ ಬಗ್ಗೆ, ಲಿಂಕ್ ಗಳ ಬಗ್ಗೆ ಗಮನವಿರಲಿ
-ನಿಮ್ಮ ಖಾಸಗಿ ವಿಷಯಗಳನ್ನು, ಫೋಟೋಗಳನ್ನು ಯಾವತ್ತೂ ಇಲ್ಲಿ ವಿನಿಮಯ ಮಾಡಿಕೊಳ್ಳಲು ಹೋಗಬೇಡಿ
-ವೃತ್ತಿಪರ ವ್ಯಕ್ತಿಗಳೇ ಇಲ್ಲಿ ಕನೆಕ್ಟೆಡ್ ಆಗುವುದರಿಂದ ನಿಮ್ಮ ವೃತ್ತಿಯ ಬಗ್ಗೆ ಮಾಹಿತಿ ಸ್ಪಷ್ಟವಾಗಿರಲಿ.
-ಕನೆಕ್ಷನ್ ರಿಕ್ವೆ ಸ್ಟ್ ಗಳನ್ನು ಪರ್ಸನಲೈಜ್ ಮಾಡಿ. ನೀವ್ಯಾಕೆ ಕನೆಕ್ಟ್ ಆಗುತ್ತಿದ್ದೀರಿ ಎಂಬುದನ್ನು ಅವರಿಗೆ ಹೇಳಿ.
-ಕನೆಕ್ಟ್ ಆದ ನಂತರ ಸ್ವಾಗತ ಸಂದೇಶವನ್ನು ಕಳಿಸಿ.
-ಲಿಂಕ್ಡ್ ಇನ್ ಗೆ ಸೈನ್ ಅಪ್ ಆದ ಕೂಡಲೇ ಇದ್ದ ಗ್ರೂಪ್ ಗಳಿಗೆಲ್ಲಾ ಸೇರುವುದು ಬೇಡ
ಗೂಗಲ್ ಪ್ಲಸ್ (Google Plus)
ಯಾವುದೇ ವ್ಯಕ್ತಿಯ ಪೋಸ್ಟ್ ಗೆ ಕಾಮೆಂಟ್ ಹಾಕುವಾಗ ಪ್ಲಸ್ ಹಾಕಿ ವ್ಯಕ್ತಿ ಹೆಸರು ಉಲ್ಲೇಖಿಸಿ
ಪೋಸ್ಟ್ ಶೇರ್ ಮಾಡುವಾಗ ನಿಮ್ಮ ಕಾಮೆಂಟ್ ನ್ನು ಹಾಕಿದ ನಂತರವೇ ಪೋಸ್ಟ್ ಶೇರ್ ಮಾಡಿ
ನಿದಿಷ್ಟ ಸರ್ಕಲ್ ನಲ್ಲಿ ಮಾತ್ರ ನಿಮ್ಮ ಪೋಸ್ಟ್ ಶೇರ್ ಮಾಡುವ ಮೂಲಕ ನಿರ್ದಿಷ್ಟ ಜನರಿಗೆ ತಲುಪುವಂತೆ ಮಾಡಿ
ನಿಮ್ಮ ಪೋಸ್ಚ್ ನಲ್ಲಿ ಬೋಲ್ಡ್ , ಇಟಾಲಿಕ್ , ಸ್ಟ್ರೈಕ್ ತ್ರೋಎಲ್ಲ ಫಾರ್ಮೇಟ್ ಗಳನ್ನು ಬಳಸಿದರೆ, ಪೋಸ್ಟ್ ಹೆಚ್ಚು ಗಮನ ಸೆಳೆಯುತ್ತದೆ
-ನಿಮ್ಮ ಪಿನ್ ಗಳಿಗೆ ಸರಿಯಾದ ವಿವರಣೆ ಕೊಡಿ
-ಮೂಲ ಪೋಸ್ಟ್ ಗೆ ಲಿಂಕ್ ಬ್ಯಾಕ್ ಮಾಡಿ ಅದಕ್ಕೆ ಕ್ರೆಡಿಟ್ ಕೊಡಿ
-ನಿಮ್ಮ ಪೋಸ್ಟ್ ಗೆ ಅನಗತ್ಯ ವಾದ ಚಿತ್ರವನ್ನು ಲಿಂಕ್ ಮಾಡಬೇಡಿ
-ನಿಮ್ಮದೇ ಪೋಸ್ಟ್ ಗೆ ಸುಮ್ ಸುಮ್ನೇ ಪಿನ್ ಮಾಡುವುದು ಸಲ್ಲ.
ಇನ್ ಸ್ಟಾಗ್ರಾಂ (Instagram)
-ನಿಮ್ಮ ಪೋಸ್ಟ್ ಗಳನ್ನು ಫಾಲೋ ಮಾಡುವಂತೆ ಹೇಳುವುದಾಗಲಿ ಅಥವಾ #tagsforlikes ಹ್ಯಾಶ್ ಟ್ಯಾಗ್ ಗಳನ್ನು ಹಾಕುವುದು ಸರಿಯಲ್ಲ
-ಸಿಕ್ಕಾಪಟ್ಟೆ ಪೋಸ್ಟ್ ಗಳನ್ನು ಹಾಕಿಕೊಂಡು ಕಿರಿ ಕಿರಿ ಮಾಡುವುದು ಬೇಡ
-ನಿಮ್ಮ ಪೋಸ್ಟ್ ಗಳಿಗೆ ಸರಿಯಾದ ಹ್ಯಾಶ್ ಟ್ಯಾಗ್ ಮಾಡಿ. 11 ಹ್ಯಾಶ್ ಟ್ಯಾಗ್ ಗಳಷ್ಟೇ ಸಾಕು, ಇದಕ್ಕಿಂತ ಹೆಚ್ಚು ಬೇಡವೇ ಬೇಡ
-ಹ್ಯಾಶ್ ಟ್ಯಾಗ್ ಬಳಕೆ ಮಾಡುವಾಗ ಅದು ಅರ್ಥಪೂರ್ಣವಾಗಿರಲಿ
-ಖಾಸಗಿ ಫೋಟೋ ಗಳನ್ನು ಶೇರ್ ಮಾಡಿ ಮುಜುಗರಕ್ಕೊಳಗಾಗದಂತೆ ನೋಡಿಕೊಳ್ಳಿ
-ವಾಟ್ಸಾಪ್ ನಲ್ಲಿ ಖಾಸಗಿ ವಿಚಾರಗಳನ್ನು ಅಥವಾ ಫೋಟೋಗಳ ವಿನಿಮಯ ಮಾಡುವಾಗ ಯಾರೊಂದಿಗೆ ಅದನ್ನು ಹಂಚಿಕೊಳ್ಳುತ್ತಿದ್ದೀರಿ, ಅವರು ವಿಶ್ವಾಸರ್ಹರೇ ಎಂಬುದರ ಬಗ್ಗೆ ಎಚ್ಚರವಿರಲಿ
-ಪ್ರೊಫೈಲ್ ಫೋಟೋಗಳು ಹಾಕುವಾಗಲೂ ಅಷ್ಟೇ ಕಾಂಟಾಕ್ಟ್ ಲಿಸ್ಟ್ ನಲ್ಲಿರುವವರಿಗೆ ಮಾತ್ರ ಕಾಣಿಸುವಂತೆ ಸೆಟ್ಟಿಂಗ್ಸ್ ಮಾಡಿಕೊಳ್ಳಿ
-ಯಾವುದೇ ಲಿಂಕ್ ಗಳನ್ನು ಗೊತ್ತಿಲ್ಲದೆ ಕ್ಲಿಕ್ ಮಾಡುವುದಾಗಲೀ, ಶೇರ್ ಮಾಡುವುದಾಗಲೀ ಮಾಡಬೇಡಿ
-ಫಾರ್ವಡ್ ಮೆಸೇಜ್ ಗಳಲ್ಲಿ ರಕ್ತ ಬೇಕಾಗಿದೆ, ಕಾಣೆಯಾಗಿದ್ದಾರೆ, ಸಹಾಯ ಹಸ್ತ ನೀಡಿ ಮೊದಲಾದ ಸಂದೇಶಗಳನ್ನು ಶೇರ್ ಮಾಡುವ ಮುನ್ನ ಅವು ನಂಬಲರ್ಹವೇ ಎಂಬುದನ್ನು ಪರಿಶೀಲಿಸಿ ಅನಂತರ ಶೇರ್ ಮಾಡಿ.
- ಇಷ್ಟೇ ಅಲ್ಲ, ಯಾವುದೇ ಸಾಮಾಜಿಕ ತಾಣದಲ್ಲಿ ನೀವು ನೋಡಿದ ಓದಿದ ಸುದ್ದಿಗಳು ನಿಜ ಎಂಬುದನ್ನು ಕಣ್ಣು ಮುಚ್ಚಿ ನಂಬ ಬೇಡಿ.
- ನಿಮ್ಮ ಆಯ್ಕೆಗಳು, ಆಸಕ್ತಿಗಳಿಗೆ ಸ್ಪಂದಿಸುವ ಗುಂಪುಗಳಲ್ಲಿ ಬೆರೆಯಿರಿ.
- ಒಳ್ಳೆಯ ನಡತೆ ಮತ್ತು ಧನಾತ್ಮಕ ಧೋರಣೆ ಇಲ್ಲಿಯೂ ಇರಲಿ
- ನಿಮ್ಮ ವೃತ್ತಿ ಮತ್ತು ಜೀವನಕ್ಕೆ ಸಹಾಯವಾಗುವಂತ ವಿಷಯಗಳಿಗೆ ಮಾತ್ರ ಗಮನಕೊಡಿ, ಅನಗತ್ಯ ವಿಚಾರಗಳಿಗೆ ಸಮಯ ವ್ಯರ್ಥ ಮಾಡಬೇಡಿ
- ಸಾಮಾಜಿಕ ತಾಣಗಳ ಬಳಕೆಗೂ ಒಂದು ಮಿತಿ ಇರಲಿ